ರಾಹುಲ್ ಗಾಂಧಿ ವಲಸೆ ನಾಯಕ: ಕೇರಳ ಚುನಾವಣೆ ಉಸ್ತುವಾರಿ ಪ್ರಲ್ಹಾದ ಜೋಶಿ ಟೀಕೆ

ತ್ರಿಶೂರ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಲಸೆ ನಾಯಕ. ಹಿಂದೊಮ್ಮೆ ತಮ್ಮ ಕುಟುಂಬದ ಹಿಡಿತದಲ್ಲಿದ್ದ ಲೋಕಸಭಾ ಕ್ಷೇತ್ರ ಅಮೇಠಿಯಲ್ಲೇ ಸೋತು ಕೇರಳದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ, ಕೇರಳ ಚುನಾವಣೆ ಉಸ್ತುವಾರಿ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರವಾಗಿ ಕಾಂಗ್ರೆಸ್‌ನ ರಾಜ್ಯ ನಾಯಕತ್ವ ಮತ್ತು ರಾಷ್ಟ್ರೀಯ ನಾಯಕತ್ವ ಭಿನ್ನ ನಿಲುವುಗಳನ್ನು ಹೊಂದಿವೆ. ನಂಬಿಕೆಗೆ ಸಂಬಂಧಿಸಿದ ಈ ವಿಚಾರದ ಬಗ್ಗೆ ವಯನಾಡ್‌ನ ಸಂಸದರಾಗಿರುವ ರಾಹುಲ್ ಗಾಂಧಿ ಅವರು ನಿಲುವು ಸ್ಪಷ್ಟಪಡಿಸಲಿ ಎಂದು ಜೋಶಿ ಒತ್ತಾಯಿಸಿದ್ದಾರೆ.
ಓದಿ: ರಾಹುಲ್ ತಾಕತ್ತಿದ್ದರೆ ಗುಜರಾತ್ನಿಂದ ಸ್ಪರ್ಧಿಸಲಿ: ಸ್ಮೃತಿ ಇರಾನಿ ಸವಾಲು
ಫೆಬ್ರುವರಿ 21ರಂದು ಕಾಸರಗೋಡಿನಿಂದ ಆರಂಭವಾಗಲಿರುವ ಬಿಜೆಪಿಯ ‘ವಿಜಯ ಯಾತ್ರೆ’ಯ ಸಿದ್ಧತೆಗಳ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ಬಾರಿ ಸಂಸದನಾಗಿ ಆಯ್ಕೆಯಾದ ಬಳಿಕವೂ ಅಮೇಠಿಯ ಅಭಿವೃದ್ಧಿಗೆ ರಾಹುಲ್ ಏನೂ ಮಾಡಿಲ್ಲ. ಅಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಅಲ್ಲಿನ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಎಕ್ಸ್–ರೇ ಯಂತ್ರ ಕೂಡ ಇಲ್ಲ’ ಎಂದು ಹೇಳಿದ್ದಾರೆ.
ಅಲ್ಲಿ (ಅಮೇಠಿ) ತಿರಸ್ಕೃತಗೊಂಡ ರಾಹುಲ್ ಕೇರಳದಲ್ಲಿ ಆಶ್ರಯ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಿಂದ ತಮಗೆ ಏನೂ ದೊರೆಯುವುದಿಲ್ಲ ಎಂಬುದನ್ನು ರಾಜ್ಯದ ಜನರು ಅರ್ಥಮಾಡಿಕೊಳ್ಳಲಿದ್ದಾರೆ ಎಂದೂ ಜೋಶಿ ಹೇಳಿದ್ದಾರೆ.
ಓದಿ: ಕೇರಳ ವಿಧಾನಸಭೆ ಚುನಾವಣೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಜೆಪಿ ಉಸ್ತುವಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.