ನವದೆಹಲಿ: ‘ಕೇರಳದ ಕೆಲವು ಜಿಲ್ಲೆಗಳು ಸೌದಿ ಅರೇಬಿಯಾದಂತೆ ಭಾಸವಾಗುತ್ತಿವೆ. ಅಲ್ಲಿ ದೇಶ ವಿರೋಧಿ ಚಿಂತನೆಗಳು ವ್ಯಾಪಕವಾಗಿ ಹರಡುತ್ತಿವೆ’ ಎಂದು ಬಿಜೆಪಿ ರಾಜ್ಯಸಭಾ ಸಂಸದ ಕೆ.ಜೆ. ಅಲ್ಫೋನ್ಸ್ ಕಣ್ಣಂತಾನಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಕೇರಳದಲ್ಲಿ ಇಸ್ಲಾಂ ಧರ್ಮದ ಕಡೆಗಿನ ಜನರ ಒಲವು ಹೆಚ್ಚಾಗುತ್ತಿದೆ. ಇದು ಅತ್ಯಂತ ದುಃಖಕರ ಸಂಗತಿ. ನೀವು ಕೇರಳದ ಕೆಲವು ಜಿಲ್ಲೆಗಳಿಗೆ ಹೋದರೆ, ಸೌದಿ ಅರೇಬಿಯಾದಲ್ಲಿದ್ದಂತೆ ಭಾಸವಾಗುತ್ತದೆ. ಜನರ ವರ್ತನೆಗಳಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ವಿಶೇಷವಾಗಿ ಅವರು ಧರಿಸುವ ಉಡುಪು (ವಸ್ತ್ರ ಸಂಹಿತೆ) ದೇಶ ವಿರೋಧಿ ಚಿಂತನೆಗಳಲ್ಲಿ ಒಂದಾಗಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಚೋದನಕಾರಿ ಘೋಷಣೆಗಳಿಗೆ ಸಂಬಂಧಿಸಿದಂತೆ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಅಲ್ಫೋನ್ಸ್ ತಿಳಿಸಿದ್ದಾರೆ.

ಓದಿ...ಭಾರತ ಮೋದಿ- ಅಮಿತ್ ಶಾ ಅವರದ್ದಲ್ಲ, ದ್ರಾವಿಡರು ಮತ್ತು ಆದಿವಾಸಿಗಳದ್ದು: ಒವೈಸಿ

‘ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಸರ್ಕಾರಗಳು ಮುಸ್ಲಿಮರು ಮತಗಳ ಮೇಲೆ ಅವಲಂಬಿತವಾಗಿವೆ’ ಎಂದು ಗುಡುಗಿದ್ದಾರೆ.

ಕೇರಳದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳು ಅಲ್ಪಸಂಖ್ಯಾತರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

ಓದಿ...ಬಿಕಿನಿ ಬೇಡ, ಭಾರತದ ಸಂಸ್ಕೃತಿಗೆ ತಕ್ಕಂತೆ ಉಡುಗೆ ಧರಿಸಿ: ಪ್ರವಾಸಿಗರಿಗೆ ಸಚಿವರ ಸಲಹೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.