ಭಾನುವಾರ, ಜೂನ್ 13, 2021
24 °C

ಸಂಬಿತ್ ಪಾತ್ರಾ ಟ್ವೀಟ್‌: ಟ್ಯಾಗ್‌ ತೆಗೆಯಲು ಟ್ವಿಟರ್‌ಗೆ ಕೇಂದ್ರ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸಂಬಿತ್ ಪಾತ್ರಾ ಅವರ ಟ್ವೀಟ್‌ನಲ್ಲಿ ಮಾಡಿರುವ ‘ತಿರುಚಲಾದ ಮಾಹಿತಿ’ ಟ್ಯಾಗ್‌ ಅನ್ನು ತೆಗೆಯಿರಿ’ ಎಂದು ಕೇಂದ್ರ ಸರ್ಕಾರವು ಟ್ವಿಟರ್‌ಗೆ ಸೂಚನೆ ನೀಡಿದೆ ಎಂದು ಮೂಲಗಳು ಹೇಳಿವೆ.

ಪಾತ್ರಾ ಅವರ ಟ್ವೀಟ್‌ ಅನ್ನು ಟ್ಯಾಗ್‌ ಮಾಡಿದ್ದು ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಈ ಕ್ರಮ ತೆಗದುಕೊಂಡಿದೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ‘ಟೂಲ್‌ಕಿಟ್’ ಸಿದ್ಧಪಡಿಸಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ಟ್ವೀಟ್‌ ಮೂಲಕ ಹಂಚಿಕೊಂಡಿರುವ ಮಾಹಿತಿಗೆ ‘ತಿರುಚಿದ ಮಾಧ್ಯಮ’ ಎಂಬುದಾಗಿ ಟ್ವಿಟರ್‌ ಗುರುತು ಹಾಕಿತ್ತು.

ಓದಿ: 

‘ಟೂಲ್‌ಕಿಟ್‌ಗೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ತನಿಖಾ ಸಂಸ್ಥೆಗಳು ಇನ್ನೂ ತನಿಖೆ ನಡೆಸುತ್ತಿವೆ. ಮಾಹಿತಿ ಸತ್ಯವೇ ಅಥವಾ ತಿರುಚಲಾಗಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ನಿರ್ಧರಿಸಲಿವೆ. ಅದು ತಿರುಚಲಾದ ಮಾಹಿತಿ ಎಂದು ಟ್ವಿಟರ್‌ ತೀರ್ಪು ನೀಡುವುದು ಸಾಧ್ಯವಿಲ್ಲ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ಗೆ ಪತ್ರ ಬರೆದಿದೆ ಎನ್ನಲಾಗಿದೆ.

ಸರ್ಕಾರ ಈ ಪತ್ರ ಬರೆದ ನಂತರ ಹಲವು ಗಂಟೆಗಳು ಕಳೆದರೂ, ಟ್ವಿಟರ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪಾತ್ರಾ ಅವರ ಟ್ವೀಟ್‌ನಲ್ಲಿ, ‘ತಿರುಚಲಾದ ಮಾಹಿತಿ’ ಎಂಬ ಟ್ಯಾಗ್ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು