ಗುರುವಾರ , ಆಗಸ್ಟ್ 11, 2022
27 °C

ಬಿಜೆಪಿ–ಶಿವಸೇನೆ ‘ಉದ್ಯಮ’ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ನಡುವೆ ಬಾಲಿವುಡ್ ಮತ್ತು ಉದ್ಯಮವು ಘರ್ಷ
ಣೆಯ ಕೇಂದ್ರವಾಗಿ ಬದಲಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಮುಂಬೈಗೆ ಭೇಟಿ ನೀಡಲಿದ್ದು, ಈ ಭೇಟಿಗೆ ಮಹಾರಾಷ್ಟ್ರ ಸರ್ಕಾರದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದಿತ್ಯನಾಥ ಅವರು ದೇಶದ ಕೈಗಾರಿಕಾ ವಲಯದ ಪ್ರಮುಖರನ್ನು ಹಾಗೂ ಬಾಲಿವುಡ್‌ನ ಖ್ಯಾತ ವ್ಯಕ್ತಿಗಳನ್ನು ಬುಧವಾರ ಭೇಟಿ ಮಾಡಲಿದ್ದಾರೆ. ತಮ್ಮ ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವುದು ಆದಿತ್ಯನಾಥ ಅವರ ಉದ್ದೇಶ. ನವ
ದೆಹಲಿಗೆ ಸಮೀಪದಲ್ಲಿ ಬೃಹತ್ ಚಿತ್ರನಗರಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಡಿ ಇರಿಸಿದೆ. ನೊಯಿಡಾ, ಗ್ರೇಟರ್ ನೊಯಿಡಾ ಅಥವಾ ಯಮುನಾ ಎಕ್ಸ್‌ಪ್ರೆಸ್‌ವೇ ಸಮೀಪ ಜಾಗ ಗುರುತಿಸುವಂತೆ ಆದಿತ್ಯ
ನಾಥ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆದಿತ್ಯನಾಥ ಅವರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ‘ನಮ್ಮ ರಾಜ್ಯದಿಂದ ವಾಣಿಜ್ಯೋದ್ಯಮಗಳನ್ನು ಒತ್ತಾಯದಿಂದ ಕರೆದೊಯ್ಯಲು ಯಾರಿಗೂ ಅವಕಾಶ ಕೊಡುವುದಿಲ್ಲ. ಮಹಾರಾಷ್ಟ್ರವು ದಶಕಗಳಿಂದಲೂ ಉದ್ಯಮಸ್ನೇಹಿ ರಾಜ್ಯ’ ಎಂದು ಉದ್ಯಮಗಳಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಆದಿತ್ಯನಾಥ ಅವರ ಹೆಸರು ಪ್ರಸ್ತಾಪಿಸದೆಯೇ ಹೇಳಿದ್ದಾರೆ.

‘ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಲವು ಉದ್ಯಮಗಳ ಕಚೇರಿಗಳು ಗುಜರಾತ್‌ಗೆ ಸ್ಥಳಾಂತರಗೊಂಡವು. ಮಹಾರಾಷ್ಟ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ಬದಲಾಗಿದ್ದಾರೆ. ಆದರೆ, ಬಿಜೆಪಿ ಈಗ ಬಾಲಿವುಡ್‌ನ ಒಂದು ಭಾಗವನ್ನು ಉತ್ತರ ಪ್ರದೇಶದ ಹೆಸರಿನಲ್ಲಿ ಬೇರೆಡೆ ಒಯ್ಯಲು ಸಿದ್ಧತೆ ನಡೆಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಆಗಿದ್ದನ್ನು ಮತ್ತೆ ಆಗಲು ಬಿಡುವುದಿಲ್ಲ’ ಎಂದು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ, ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು