ಮಂಗಳವಾರ, ಜನವರಿ 19, 2021
17 °C
ಜ.18ರಿಂದ ಪರೀಕ್ಷೆಗಳನ್ನು ನಡೆಸಲು ಬಿಎಂಸಿ ಆದೇಶ

ಮಹಾರಾಷ್ಟ್ರ: ಭೌತಿಕವಾಗಿ ಪರೀಕ್ಷೆಗಳನ್ನು ನಡೆಸಲು ಬಿಎಂಸಿ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಕೋವಿಡ್‌19‘ ಮಾರ್ಗಸೂಚಿಯೊಂದಿಗೆ ಈಗಾಗಲೇ ನಗರದಲ್ಲಿ ನಿಗದಿಪಡಿಸಿರುವ ವಿವಿಧ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಶಿಕ್ಷಣ ಮಂಡಳಿಗಳ ಪರೀಕ್ಷೆಯನ್ನು ಭೌತಿಕವಾಗಿಯೇ ನಡೆಸಲು ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಅವಕಾಶ ನೀಡಿದೆ.

ಜನವರಿ 18 ರಿಂದ ಈ ಎಲ್ಲ ಪರೀಕ್ಷೆಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡದಿದ್ದರೆ, ವಿದ್ಯಾರ್ಥಿಗಳಿಗೆ ಒಂದು ವರ್ಷ ನಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಂಡಳಿಗಳು ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿದೆ ಎಂದು ಬಿಎಂಸಿ ಮಂಗಳವಾರ ತಡರಾತ್ರಿ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಿದೆ.

‌ಇದೇ ವೇಳೆ, ‘ಕೋವಿಡ್‌ 19‘ನ ಎರಡನೇ ಅಲೆ ಭೀತಿಯಿಂದಾಗಿ ಜ. 15ರವರೆಗೆ ಶಾಲಾ ಕಾಲೇಜುಗಳು ತೆರೆಯುವುದನ್ನು ಮುಂದೂಡಿದೆ.

ಇಂಟರ್‌ನ್ಯಾಷನಲ್‌ ಸ್ಕೂಲ್ಸ್ ಅಸೋಸಿಯೇಶನ್ (ಕೇಂಬ್ರಿಡ್ಜ್ ಬೋರ್ಡ್) ಸದಸ್ಯರು 9 ರಿಂದ 12 ನೇ ತರಗತಿಗಳ ಪ್ರಾಥಮಿಕ ಅಥವಾ ಪೂರ್ವ ಯೋಜಿತ ಪರೀಕ್ಷೆಗಳನ್ನು ನಡೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಸ್‌ಎಸ್‌ಸಿ, ಎಚ್‌ಎಸ್‌ಸಿ (ಮಹಾರಾಷ್ಟ್ರ ಮಂಡಳಿ), ಸಿಬಿಎಸ್‌ಇ, ಐಬಿ, ಸಿಐಎಸ್‌ಸಿಇ ಮತ್ತು ಐಜಿಸಿಎಸ್‌ಇ  ಮತ್ತು ಇತರ ಮಂಡಳಿಗಳು ತಮ್ಮ ಯೋಜಿತ ಸಮಯ ವೇಳಾಪಟ್ಟಿಯ ಪ್ರಕಾರ ಘೋಷಿತ ಮತ್ತು 10 ಮತ್ತು 12 ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಬಹುದು ಎಂದು ಬಿಎಂಸಿ ಆದೇಶದಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು