ಶನಿವಾರ, ಮೇ 15, 2021
26 °C

ರಾಯಪುರ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಶವಗಳ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಗುಂಪಾಗಿ ಸುಡು ಬಿಸಿಲಿನಲ್ಲಿ ಆಸ್ಪತ್ರೆಯ ಹೊರಗಡೆ ಸ್ಟ್ರೆಚರ್ ಮೇಲೆ ಮಲಗಿಸಿರುವ ದೃಶ್ಯ ಛತ್ತೀಸಗಡದ ರಾಯಪುರದ ಆಸ್ಪತ್ರೆಯಲ್ಲಿ ಕಂಡುಬಂದಿದೆ ಎಂದು ಎನ್‌.ಡಿ. ಟಿ.ವಿ. ವರದಿ ಮಾಡಿದೆ. 

ಆಸ್ಪತ್ರೆ ಸಿಬ್ಬಂದಿಯ ಊಹೆಗೆ ನಿಲುಕದ ಸಂಖ್ಯೆಯ ಸಾವುಗಳಿಂದಾಗಿ ರಾಯ‌ಪುರದ ಡಾ.ಭೀಮರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಶವಗಳನ್ನು ಇರಿಸಲು ಸ್ಥಳಾವಕಾಶವಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.  

ಒಂದೇ ಬಾರಿ ಹಲವರು ಮೃತಪಟ್ಟಿದ್ದರಿಂದ ಆಸ್ಪತ್ರೆಯವರಿಗೆ ಮೃತದೇಹಗಳನ್ನು ಇರಿಸಲು ಜಾಗವಿಲ್ಲದಂತಾಗಿತ್ತು. ಇದರ ವಿಡಿಯೊ ದೃಶ್ಯಾವಳಿ ವೈರಲ್ ಆಗಿವೆ. ಸ್ಥಳದ ಅಭಾವದ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಳೆದೊಂದು ವಾರದಿಂದ ಆಸ್ಪತ್ರೆಯ ಐಸಿಯು ಹಾಗೂ ಆಮ್ಲಜನಕ ಪೂರೈಕೆ ಸೌಲಭ್ಯ ಇರುವ ಬೆಡ್‌ಗಳು ಶೇಕಡ ನೂರರಷ್ಟು ಭರ್ತಿಯಾಗಿವೆ.

‘ಒಂದೇ ಬಾರಿ ಇಷ್ಟೊಂದು ಜನರು ಮೃತಪಡುತ್ತಾರೆ ಎಂಬ ಅಂದಾಜು ಯಾರಿಗೂ ಇರಲಿಲ್ಲ. ಸಾಮಾನ್ಯಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದರಿಂದ ಮೃತದೇಹಗಳನ್ನು ಇರಿಸಲು ಅಗತ್ಯವಾದ ಶೀಥಲೀಕರಣ ವ್ಯವಸ್ಥೆ ಇರಲಿಲ್ಲ. ಒಂದಿಬ್ಬರು ಮೃತಪಡುವ ಸಮಯದಲ್ಲಿ 10ರಿಂದ 20 ಜನರು ಮೃತಪಟ್ಟಿದ್ದರಿಂದ ಹೀಗಾಗಿದೆ. ಇಷ್ಟೊಂದು ಜನರಿಗೆ ಫ್ರೀಜರ್ ಒದಗಿಸಲು ಹೇಗೆ ಸಾಧ್ಯ? ಚಿತಾಗಾರಗಳೂ ಭರ್ತಿಯಾಗಿವೆ’ ಎಂದು ರಾಯಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಮೀರಾ ಬಘೆಲ್ ತಿಳಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ರಾಯ‌ಪುರ ನಗರದಲ್ಲಿ ಪ್ರತಿದಿನ ಸರಾಸರಿ 55 ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಅವುಗಳಲ್ಲಿ ಹೆಚ್ಚಿನವು ಕೋವಿಡ್‌ ರೋಗಿಗಳ ಶವಗಳು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು