ಗಂಗಾ ನದಿ ದಡದಲ್ಲಿ ಮೃತದೇಹಗಳ ರಾಶಿ: ಕೇಂದ್ರ ಜಲಶಕ್ತಿ ಸಚಿವರಿಂದ ತನಿಖೆಗೆ ಸೂಚನೆ

ಪಟ್ನಾ: ಗಂಗಾ ನದಿಯ ದಡದಲ್ಲಿ ಸೋಮವಾರ ಮೃತದೇಹಗಳ ರಾಶಿ ಪತ್ತೆಯಾಗಿರುವುದು ದುರುದುಷ್ಟಕರ ಎಂದಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಘಟನೆ ಬಗ್ಗೆ ತನಿಖೆ ನಡೆಸುವಂತೆ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ಬಿಹಾರದ ಬಕ್ಸಾರ್ ಜಿಲ್ಲೆಯ ಚೌಸಾ ಗ್ರಾಮದ ಗಂಗಾ ಮಹಾದೇವ್ ಘಾಟ್ ಬಳಿ 12ಕ್ಕೂ ಹೆಚ್ಚು ಹೆಣಗಳು ತೇಲಿ ಬಂದು ದಡ ಸೇರಿದ್ದವು. ಈ ವೇಳೆ ನಾಯಿಗಳು ಶವಗಳನ್ನು ಕಿತ್ತು ತಿನ್ನುವ ಭಯಾನಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಓದಿ: ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳು: ಕೋವಿಡ್ ಸೋಂಕಿತರದ್ದೆಂಬ ಶಂಕೆ
ಗಂಗಾ ನದಿ ಹರಿಯುವ ಉತ್ತರ ಪ್ರದೇಶ, ಬಿಹಾರದಲ್ಲೂ ನದಿಯ ತೀರದಲ್ಲಿ ಶವಗಳು ಪತ್ತೆಯಾಗಿದ್ದವು. ಶವಗಳ ಮೇಲೆ ಸೀಲ್ ಮಾರ್ಕ್ ಇರುವುದು ಪತ್ತೆಯಾಗಿರುವುದರಿಂದ ಅವು ಕೋವಿಡ್ ಮೃತದೇಹಗಳು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.
ಈ ಘಟನೆ ಸಂಬಂಧ ಉಭಯ ರಾಜ್ಯಗಳು ತನಿಖೆ ನಡೆಸಬೇಕು ಎಂದು ಗಜೇಂದ್ರ ಸಿಂಗ್ ಶೇಖಾವತ್ ಸೂಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.