ಶನಿವಾರ, ಜನವರಿ 28, 2023
24 °C

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ನಿವಾಸದ ಬಳಿ ಬಾಂಬ್‌ ಪತ್ತೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಅವರ ನಿವಾಸದ ಬಳಿ ಬಾಂಬ್‌ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಮುಖ್ಯಮಂತ್ರಿಗಳ ನಿವಾಸದ ಹೆಲಿಪ್ಯಾಡ್‌ ಸಮೀಪದಲ್ಲೇ ಬಾಂಬ್ ಮಾದರಿಯ ಸ್ಫೋಟಕ ಸಾಧನ ಪತ್ತೆಯಾಗಿದೆ ಎಂದು ಪೊಲೀಸ್‌ ಇಲಾಖೆಯ ಪ್ರಾಥಮಿಕ ಮಾಹಿತಿಗಳು ತಿಳಿಸಿವೆ 

ಸ್ಫೋಟಕ ವಸ್ತು ಪತ್ತೆಯಾದ ಸ್ಥಳಕ್ಕೂ ಸಿ.ಎಂ ನಿವಾಸಕ್ಕೂ ಒಂದು ಕಿ.ಮೀಟರ್ ದೂರ ಇದೆ. ಮಾವಿನ ತೋಟದಲ್ಲಿ ಇದು ಪತ್ತೆಯಾಗಿದೆ.

ಮಾವಿನ ತೋಟದಲ್ಲಿ ಕೊಳವೆ ಬಾವಿ ನಿರ್ವಾಹಕರೊಬ್ಬರು ಸ್ಫೋಟಕ ಸಾಧನಗಳನ್ನು ಗುರುತಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ರವಾನೆ ಮಾಡಲಾಗಿದ್ದು ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಇದು ಬಾಂಬ್‌ ಎಂಬುದನ್ನು ಪೊಲೀಸರು ಈವರೆಗೂ ಖಚಿತಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು