ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಘಟಕದಲ್ಲಿ ಬೆಂಕಿ: ಮನೆಯಲ್ಲೇ ಇರಲು ನಿವಾಸಿಗಳಿಗೆ ಸೂಚನೆ

Last Updated 9 ಮಾರ್ಚ್ 2023, 19:46 IST
ಅಕ್ಷರ ಗಾತ್ರ

ಕೊಚ್ಚಿ: ತ್ಯಾಜ್ಯ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿರುವುದರಿಂದ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದ್ದು, ಮನೆಯಿಂದ ಹೊರಬಾರದಂತೆ ಇಲ್ಲಿನ ಬ್ರಹ್ಮಾಪುರಂ ಹಾಗೂ ಸುತ್ತಲಿನ ಪ್ರದೇಶದ ನಿವಾಸಿಗಳಿಗೆ ಕೇರಳ ಸರ್ಕಾರವು ಗುರುವಾರ ಮನವಿ ಮಾಡಿದೆ. ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯದಂತೆಯೂ ಸೂಚಿಸಿದೆ.

ಮನೆಯ ಹೊರಭಾಗದಲ್ಲಿ ಜಾಗಿಂಗ್‌ ಹಾಗೂ ವ್ಯಾಯಾಮ ಮಾಡದಂತೆ ಸಲಹೆ ನೀಡಿದ್ದು, ಮನೆಯಿಂದ ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ಕಡ್ಡಾಯವಾಗಿ ಎನ್‌–95 ಮಾಸ್ಕ್‌ ಧರಿಸುವಂತೆ ತಿಳಿಸಿದೆ.

ಎರ್ನಾಕುಲಂ ಜಿಲ್ಲಾಡಳಿತವು ಕಲಮಸ್ಸೆರಿ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ವೈದ್ಯಾಧಿಕಾರಿಯವರ (ಡಿಎಂಒ) ಕಚೇರಿಯಲ್ಲಿ ಕಂಟ್ರೋಲ್‌ ಕೊಠಡಿಗಳನ್ನು ತೆರೆದಿದ್ದು, ಇವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ತ್ಯಾಜ್ಯ ಸುಡುವುದರಿಂದ ಹೊರಸೂಸುವ ವಿಷಕಾರಿ ಹೊಗೆಯಿಂದ ಉಸಿರುಗಟ್ಟುವಿಕೆಯಂತಹ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಕಂಟ್ರೋಲ್‌ ಕೊಠಡಿಗೆ ಕರೆಮಾಡಿ ಮಾಹಿತಿ ನೀಡುವಂತೆಯೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT