ನವದೆಹಲಿ: ‘ಬ್ರೆಜಿಲ್‌ಗೆ 2 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಸುವ ಒಪ್ಪಂದ ಮಾಡಿಕೊಳ್ಳುವಲ್ಲಿ ಯಾವುದೇ ತಪ್ಪೆಸಗಿಲ್ಲ’ ಎಂದು ಭಾರತ್ ಬಯೊಟೆಕ್ ಸ್ಪಷ್ಟನೆನೀಡಿದೆ.

ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ 2 ಕೋಟಿ ಡೋಸ್‌ಗಳನ್ನು ತುರ್ತು ಬಳಕೆಗೆ ಖರೀದಿಸಲು ಬ್ರೆಜಿಲ್ ಸರ್ಕಾರ ಜೂನ್ 4ರಂದು ಒಪ್ಪಂದ ಮಾಡಿಕೊಂಡಿದೆ. ಪ್ರತಿ ಡೋಸ್‌ಗೆ 15 ಡಾಲರ್‌ನಂತೆ (₹ 1,115) 2 ಕೋಟಿ ಡೋಸ್‌ಗಳನ್ನು, ಅಂದಾಜು ₹ 2,470 ಕೋಟಿ ಮೊತ್ತಕ್ಕೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಮಾಡಿಕೊಳ್ಳುವಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸಾನ್ಯಾರೋ ಅಕ್ರಮ ಎಸಗಿದ್ದಾರೆ ಎಂದು ಬ್ರೆಜಿಲ್‌ನ ವಿರೋಧ ಪಕ್ಷಗಳು ಆರೋಪಿಸಿವೆ.

‘ಬ್ರೆಜಿಲ್‌ಗೆ ಲಸಿಕೆ ಮಾರಾಟ ಮಾಡುವ ಸಂಬಂಧ 2020ರ ನವೆಂಬರ್‌ನಿಂದಲೇ ಮಾತುಕತೆ ನಡೆಯುತ್ತಿದೆ. 8 ತಿಂಗಳ ಸುದೀರ್ಘ ಮಾತುಕತೆಯ ನಂತರ ಒಪ್ಪಂದ ಅಂತಿಮ ರೂಪಕ್ಕೆ ಬಂದಿದೆ. ಈ ಒಪ್ಪಂದ ಮಾಡಿಕೊಳ್ಳುವಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಕ್ರಮವಾಗಿ ನಡೆಸಿದ್ದೇವೆ. ಯಾವ ತಪ್ಪೂ ಎಸಗಿಲ್ಲ. ಒಪ್ಪಂದ ಆಗಿದ್ದರೂ, ಈವರೆಗೆ ಒಂದು ರೂಪಾಯಿ ಮುಂಗಡವನ್ನೂ ನಾವು ಪಡೆದಿಲ್ಲ. ಒಂದು ಡೋಸ್ ಲಸಿಕೆಯನ್ನೂ ಪೂರೈಸಿಲ್ಲ. ಈ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಭಾರತ್ ಬಯೊಟೆಕ್ಹೇಳಿದೆ.

ಆರೋಪಗಳು
*ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್ ಲಸಿಕೆಗಳನ್ನು ಬಳಸಲು ಅನುಮತಿ ಇಲ್ಲದೇ ಇದ್ದರೂ, ಆರೋಗ್ಯ ಸಚಿವಾಲಯವು ಒಮ್ಮೆ ತಿರಸ್ಕರಿಸಿದ್ದ ಲಸಿಕೆಯನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ
* ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್ ಹೊರತುಪಡಿಸಿ ಇನ್ನೂ ಐದು ಲಸಿಕೆಗಳ ಬಳಕೆಗೆ ಅನುಮತಿ ನೀಡಲಾಗಿದೆ. ವಿಶ್ವದ ಹಲವೆಡೆ ಬಳಕೆಯಲ್ಲಿರುವ ಆ ಲಸಿಕೆಗಳ ದರಕ್ಕಿಂತಲೂ, ಹೆಚ್ಚಿನ ದರದಲ್ಲಿ ಕೋವ್ಯಾಕ್ಸಿನ್ ಅನ್ನು ಖರೀದಿಸಲಾಗಿದೆ
* ಈ ಒಪ್ಪಂದ ಕುದುರಿಸುವುದರಲ್ಲಿ ಸಿಂಗಪುರದ ಮ್ಯಾಡಿಸನ್ ಬಯೊಟೆಕ್ 4.5 ಕೋಟಿ ಡಾಲರ್ (ಅಂದಾಜು ₹ 330 ಕೋಟಿ) ಮೊತ್ತದ ಬಿಲ್ ನೀಡಿದೆ. ಈ ಬಿಲ್ ನೀಡಿಕೆಯಲ್ಲಿ ಸಾಕಷ್ಟು ಲೋಪಗಳಿವೆ

ಸ್ಪಷ್ಟನೆ
*ಕೋವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಗಳನ್ನು ಆಧರಿಸಿ ಈ ಲಸಿಕೆ ಬಳಕೆಗೆ ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಒಪ್ಪಿಗೆ ನೀಡಿದೆ
* ವಿಶ್ವದ ಬೇರೆ ದೇಶಗಳಿಗೆ ಕೋವ್ಯಾಕ್ಸಿನ್ ಲಸಿಕೆಯ ಪ್ರತಿ ಡೋಸ್ ಅನ್ನು 15-20 ಡಾಲರ್‌ಗೆ (ಅಂದಾಜು ₹ 1,115ರಿಂದ ₹ 1,486) ಮಾರಾಟ ಮಾಡಲಾಗುತ್ತಿದೆ. ಬ್ರೆಜಿಲ್‌ಗೆ 15 ಡಾಲರ್‌ಗೆ ಒಂದು ಡೋಸ್‌ನಂತೆ ಪೂರೈಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ
* ಭಾರತ್ ಬಯೊಟೆಕ್‌ನ ಮುಖ್ಯಸ್ಥ ಕೃಷ್ಣಾ ಎಳ್ಳಾ ಅವರೇ ಲಸಿಕೆ ಸಂಶೋಧನೆ, ಕ್ಲಿನಿಕಲ್ ಟ್ರಯಲ್ ಮತ್ತು ಲಸಿಕೆ ಮಾರಾಟ ವ್ಯವಹಾರಗಳನ್ನು ನಿರ್ವಹಿಸಲು ಮ್ಯಾಡಿಸನ್ ಬಯೊಟೆಕ್ ಕಂಪನಿಯನ್ನು 2020ರಲ್ಲಿ ಸ್ಥಾಪಿಸಿದ್ದರು. ಆ ಕಂಪನಿ ಮೂಲಕವೇ ಕೆಲವು ವಹಿವಾಟು ನಡೆದಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.