ಸೋಮವಾರ, ಜುಲೈ 4, 2022
21 °C

ಭಾರತ – ಬಾಂಗ್ಲಾ ಗಡಿ ಬಳಿ ಡ್ರೋನ್‌ ಪತ್ತೆ, ಬಿಎಸ್ಎಫ್‌ ತನಿಖೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಕೋಲ್ಕತ: ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಸ್ ಜಿಲ್ಲೆಯಲ್ಲಿ ಭಾರತ-ಬಾಂಗ್ಲಾದೇಶ ಗಡಿಗೆ 300 ಮೀಟರ್ ದೂರದಲ್ಲಿರುವ ಕೃಷಿ ಭೂಮಿಯೊಂದರಲ್ಲಿ  ಶನಿವಾರ ಡ್ರೋನ್ ಪತ್ತೆಯಾಗಿದೆ. ಈ ಡ್ರೋನ್ ಅನ್ನು ಭಾರತದ ಗಡಿ ಭದ್ರತಾ ಪಡೆ(ಬಿಎಸ್ಎಫ್) ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಚೀನಾದಲ್ಲಿ ನಿರ್ಮಿಸಿದ ಈ ಡ್ರೋನ್‌ನಲ್ಲಿ ಯಾವುದೇ ಕ್ಯಾಮೆರಾ ಸಲಕರಣೆ ಪತ್ತೆಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ. 

ಆದಾಗ್ಯೂ, ರೈತನ ಕೃಷಿ ಭೂಮಿಯಲ್ಲಿ ಪತ್ತೆಯಾದ ಚೀನಾದ ಈ ಡ್ರೋನ್ ಅನ್ನು ಗಡಿಯಾಚೆಗಿನ ಅಪರಾಧ ಚಟುವಟಿಕೆಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಗಡಿ ಭದ್ರತಾ ಪಡೆ ತನಿಖೆ ನಡೆಸುತ್ತಿದೆ.

ಉತ್ತರ 24 ಪರಗಣಸ್ ಜಿಲ್ಲೆಯ ಪೆಟ್ರಪೊಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಕ್ವಾಡ್‌ಕಾಪ್ಟರ್ ಮಾದರಿಯ ಎಸ್500 ಡ್ರೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆ ನಡೆಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಸೂಚಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ. 

ಚೀನಾದಲ್ಲಿ ನಿರ್ಮಾಣವಾದ ಈ ಡ್ರೋನ್ ಮಾರ್ಚ್ 19ರಂದು ಪೂರ್ಬಪರ ಎಂಬ ಗ್ರಾಮದ ಪಂಕಜ್ ಸರ್ಕಾರ್ ಅವರ ಕೃಷಿ ಭೂಮಿಯಲ್ಲಿ ಪತ್ತೆಯಾಗಿತ್ತು. ತುಂಡಾಗಿದ್ದ ಈ ಡ್ರೋನ್ ಅನ್ನು ರೈತ ಪೆಟ್ರಪೊಲೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಡ್ರೋನ್ ಪತ್ತೆಯಾದ ಈ ಭೂಮಿಯು ಅಂತರರಾಷ್ಟ್ರೀಯ ಗಡಿಗೆ ಕೇವಲ 300 ಮೀಟರ್ ದೂರದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು