ಜಲಸಂಪನ್ಮೂಲ ಅಭಿವೃದ್ಧಿಗೆ ಡೆನ್ಮಾರ್ಕ್ ಜತೆ ಒಪ್ಪಂದ: ಸಂಪುಟ ಅನುಮೋದನೆ

ನವದೆಹಲಿ: ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಡೆನ್ಮಾರ್ಕ್ ಜತೆಗಿನ ಒಡಂಬಡಿಕೆಗೆ (ಎಂಒಯು) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸುಲಭ ಮಾಹಿತಿ ಲಭ್ಯತೆ, ಸಮಗ್ರ ಮತ್ತು ಸ್ಮಾರ್ಟ್ ಜಲಸಂಪನ್ಮೂಲ ಅಭಿವೃದ್ಧಿ ಹಾಗೂ ನಿರ್ವಹಣೆ, ಜಲಚರ ಮ್ಯಾಪಿಂಗ್, ಅಂತರ್ಜಲ ಮಾದರಿ, ಮೇಲ್ವಿಚಾರಣೆ ಮತ್ತು ಮರುಪೂರಣ, ಮನೆಗಳ ಮಟ್ಟದಲ್ಲಿ ಪರಿಣಾಮಕಾರಿ ಮತ್ತು ಸುಸ್ಥಿರ ನೀರು ಸರಬರಾಜು ದಕ್ಷತೆ, ಆದಾಯೇತರ ನೀರು ಮತ್ತು ಶಕ್ತಿಯ ಬಳಕೆ ಕಡಿಮೆ ಮಾಡುವುದು, ಹವಾಮಾನ ಬದಲಾವಣೆ ತಗ್ಗಿಸುವಿಕೆ, ನದಿ ಕೇಂದ್ರಿತ ನಗರ ಯೋಜನೆ, ದ್ರವ ತ್ಯಾಜ್ಯ ತಗ್ಗಿಸುವ ಕ್ರಮಗಳು ಒಡಂಬಡಿಕೆಯಲ್ಲಿ ಒಳಗೊಂಡಿವೆ ಎಂದು ಬುಧವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸ್ಮಾರ್ಟ್ ಜಲ ಸಂಪನ್ಮೂಲಗಳ ನಿರ್ವಹಣೆಗೆ ಶ್ರೇಷ್ಠತಾ ಕೇಂದ್ರ ಮತ್ತು ವಾರಾಣಸಿಯಲ್ಲಿ ಶುದ್ಧ ನದಿ ನೀರಿನ ಸ್ಮಾರ್ಟ್ ಲ್ಯಾಬ್ ಈ ಒಡಂಬಡಿಕೆಯಲ್ಲಿದೆ. ಸಮಗ್ರ ಮತ್ತು ಸುಸ್ಥಿರ ವಿಧಾನದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಸುರಕ್ಷಿತ ನೀರಿನ ಬೇಡಿಕೆಗಳ ಪೂರೈಕೆ ಖಾತ್ರಿಪಡಿಸುವುದು ಈ ಒಪ್ಪಂದದ ಮೂಲ ಉದ್ದೇಶ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮೇ 3ರಂದು ಸ್ಕ್ಯಾಂಡಿನೇವಿಯನ್ ದೇಶಕ್ಕೆ ಭೇಟಿ ನೀಡಿದ ಸಂದರ್ಭ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಡೆನ್ಮಾರ್ಕ್ ಪರಿಸರ ಸಚಿವಾಲಯದ ನಡುವಿನ ಉದ್ದೇಶಿತ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.