ಶುಕ್ರವಾರ, ಡಿಸೆಂಬರ್ 2, 2022
22 °C

ಐಟಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ತೆಲಂಗಾಣ ಸಚಿವ ಮಲ್ಲಾರೆಡ್ಡಿ ವಿರುದ್ಧ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಶೋಧ ಕಾರ್ಯಾಚರಣೆಯ ವೇಳೆ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪ‍ಡಿಸಿದ ಆರೋಪದಲ್ಲಿ ತೆಲಂಗಾಣ ಕಾರ್ಮಿಕ ಕಲ್ಯಾಣ ಸಚಿವ ಮಲ್ಲಾ ರೆಡ್ಡಿ ಅವರ ವಿರುದ್ಧ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಲ್ಲಾ ರೆಡ್ಡಿ ಅವರ ಪುತ್ರ ನೀಡಿರುವ ದೂರಿನ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ದೂರು ಸ್ವೀಕರಿಸಿ ಝಿರೊ ಎಫ್‌ಐಆರ್‌ (‘ಘಟನೆ ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ನಡೆದಿಲ್ಲ’ ಎಂಬ ಕಾರಣಕ್ಕೆ ದೂರು ಸ್ವೀಕರಿಸುವ ಯಾವುದೇ ಠಾಣೆಯ ಪೊಲೀಸರು ಅದಕ್ಕೆ ಸಂಖ್ಯೆಯನ್ನು ನೀಡದೆ ಘಟನೆ ನಡೆದ ಠಾಣೆಯ ವ್ಯಾಪ್ತಿಗೆ ವರ್ಗಾಯಿಸುವ ಮುನ್ನ ಅಂತಹ ಎಫ್‌ಐಆರ್ ಅನ್ನು ಝೀರೊ ಎಫ್‌ಐಆರ್ ಎಂದು ಕರೆಯಲಾಗುತ್ತದೆ) ದಾಖಲಿಸಿಕೊಂಡಿರುವ ಬೋವನಪಲ್ಲಿ ಪೊಲೀಸರು, ‘ದೂರಿನ ಕುರಿತಂತೆ ಮುಂದಿನ ಕ್ರಮಕ್ಕಾಗಿ ದುಂಡಿಗಲ್‌ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗುವುದು‘ ಎಂದೂ ವಿವರಿಸಿದ್ದಾರೆ.

ಮಲ್ಲಾ ರೆಡ್ಡಿ ಅವರ ಸಂಬಂಧಿಕರು ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಐ.ಟಿ ಅಧಿಕಾರಿಯೊಬ್ಬರು ದೂರಿನಲ್ಲಿ ಆರೋಪಿಸಿದ್ದಾರೆ.

‘ಐ.ಟಿ ಅಧಿಕಾರಿಗಳು ಹಲವು ದಾಖಲೆಗಳಿಗೆ ಅಣ್ಣನಿಂದ ಬಲವಂತವಾಗಿ ಸಹಿ ಪಡೆದುಕೊಂಡಿದ್ದಾರೆ’ ಎಂದು ಸಚಿವರ ಕಿರಿಯ ಪುತ್ರ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಓದಿ... ತೆಲಂಗಾಣ ಶಾಸಕರ ಖರೀದಿ ಯತ್ನ ಪ್ರಕರಣ: ಬಿ.ಎಲ್‌. ಸಂತೋಷ್‌ಗೆ ಎರಡನೇ ನೋಟಿಸ್‌ ಜಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು