ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಮೂಲಕ ಕೊರೊನಾ ವೈರಸ್ ಪ್ರಸರಣ: ಸಿಸಿಎಂಬಿಯಿಂದ ಅಧ್ಯಯನ

ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಹೆಚ್ಚಿಸಲು ಅನುಕೂಲ
Last Updated 28 ಸೆಪ್ಟೆಂಬರ್ 2020, 7:11 IST
ಅಕ್ಷರ ಗಾತ್ರ

ಹೈದರಾಬಾದ್: ಸೋಂಕಿತ ವ್ಯಕ್ತಿಯಿಂದ ಕೊರೊನಾ ವೈರಸ್‌ ಗಾಳಿಯಲ್ಲಿ ಸೇರ್ಪಡೆಯಾಗುವುದೇ? ಹೌದು ಎಂದಾದಲ್ಲಿ ಆಸ್ಪತ್ರೆ ಪರಿಸರದಲ್ಲಿನ ಗಾಳಿಯಲ್ಲಿ ಈ ವೈರಸ್ ಎಷ್ಟು ಸಮಯ ಜೀವಿಸುತ್ತದೆ, ಎಷ್ಟು ದೂರ ಚಲಿಸುತ್ತದೆ ಎಂಬ ಬಗ್ಗೆ ಹೈದರಾಬಾದ್‌ನ ಸಿಎಸ್‌ಐಆರ್‌–ಸೆಂಟರ್ ಫಾರ್‌ ಸೆಲ್ಯುಲಾರ್‌ ಅಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಸಂಸ್ಥೆ ಅಧ್ಯಯನ ಆರಂಭಿಸಿದೆ.

ಗಾಳಿ ಮೂಲಕವೂ ಕೊರೊನಾ ವೈರಸ್‌ ಪ್ರಸರಣವಾಗುತ್ತದೆ ಎಂಬುದಾಗಿ ವಿಶ್ವದ ವಿವಿಧ ದೇಶಗಳ 200ಕ್ಕೂ ಹೆಚ್ಚು ಜನ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದರು. ಈ ಹಿನ್ನೆಯಲ್ಲಿ ಈ ಅಧ್ಯಯನಕ್ಕೆ ಮಹತ್ವ ಬಂದಿದೆ.

‘ಆಸ್ಪತ್ರೆಯಲ್ಲಿ ಹಾಗೂ ಸದಾ ಸೋಂಕಿತರ ಸಮೀಪದಲ್ಲೇ ಕಾರ್ಯನಿರ್ವಹಿಸುವ ಆರೋಗ್ಯ ಸೇವಾ ಸಿಬ್ಬಂದಿಯ ಸುರಕ್ಷತೆಯನ್ನು ಹೆಚ್ಚಿಸಲು ಈ ಅಧ್ಯಯನ ಸಹಕಾರಿಯಾಗಲಿದೆ‘ ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಈ ಅಧ್ಯಯನದಿಂದ ದೊರೆಯುವ ಫಲಿತಾಂಶವನ್ನು ಆಧರಿಸಿ, ಸಾರ್ವಜನಿಕರು ಸೇರುವ ಬ್ಯಾಂಕ್‌, ಮಾಲ್‌ನಂತಹ ಪ್ರದೇಶಗಳು ಅಥವಾ ಬಯಲಿನಲ್ಲಿರುವ ಜನರಿಂದ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ‘ಕೊರೊನಾ ಸೋಂಕಿತ ವ್ಯಕ್ತಿಯ ಪರಿಸರದಲ್ಲಿ ವೈರಸ್‌ ಎಷ್ಟು ದೂರ ಮತ್ತು ಸಮಯ ಗಾಳಿಯಲ್ಲಿ ಇರುತ್ತದೆ. ಸೋಂಕಿತರಿಂದ ವೈರಸ್‌ ಗಾಳಿಯೊಳಗೆ ಸೇರಿದ ನಂತರ ಎಷ್ಟು ಹೊತ್ತಿನವರೆಗೆ ಜೀವಿಸಿರುತ್ತದೆ ಎಂಬುದನ್ನು ಅಧ್ಯಯನದಿಂದ ತಿಳಿಯಲಾಗುತ್ತದೆ‘ ಎಂದು ಮಿಶ್ರಾ ವಿವರಿಸಿದ್ದಾರೆ.

ಈ ಅಧ್ಯಯನದ ಅಡಿಯಲ್ಲಿ ಆಸ್ಪತ್ರೆಗಳಲ್ಲಿರುವ ವಿವಿಧ ಸ್ಥಳಗಳಾದ ತೀವ್ರ ನಿಗಾ ಘಟಕ ಅಥವಾ ಕೋವಿಡ್‌– 19 ವಾರ್ಡ್‌ಗಳಿಂದ ಎರಡು, ನಾಲ್ಕು ಮತ್ತು ಎಂಟು ಮೀಟರ್‌ ವ್ಯಾಪ್ತಿಯಲ್ಲಿರುವ ವ್ಯಕ್ತಿಗಳಿಂದ ಮಾದರಿಗಳನ್ನು ಸಂಗ್ರಹಿಸಿ, ಅಧ್ಯಯನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT