ಸೋಮವಾರ, ಅಕ್ಟೋಬರ್ 26, 2020
25 °C
₹20ಲಕ್ಷ ಲಂಚದ ಬೇಡಿಕೆ

ಕೇಂದ್ರ ಅಬಕಾರಿ ಕಚೇರಿಯ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಬೆಳಗಾವಿಯಲ್ಲಿರುವ ಕೇಂದ್ರ ಅಬಕಾರಿ ಮತ್ತು ತೆರಿಗೆ (ಜಿಎಸ್‌ಟಿ) ಕಮಿಷನರೇಟ್ ಕಚೇರಿಯ ಮೂವರು ಅಧಿಕಾರಿಗಳನ್ನು ಇದೇ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಆದೇಶಿಸಿದೆ.

ಇನ್‌ಸ್ಟೆಕ್ಟರ್ ವೈಭವ ಗೋಯಲ್‌, ಸೂಪರಿಟೆಂಡೆಂಟ್‌ ಸುರೇಶ ಜಡಗಿ ಮತ್ತು ಡೆಪ್ಯುಟಿ ಸುಪರಿಟೆಂಡೆಂಟ್‌ ಮೋಹನಕುಮಾರ್‌ ಅವರೇ ಬಂಧಿತರು. 

ಜಿಎಸ್‌ಟಿ ಕಡಿಮೆ ಮಾಡಲು ಈ ಅಧಿಕಾರಿಗಳು ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಆರ್‌.ಎನ್.‌ ಪಾನ್‌ಮಸಾಲಾ ಕಂಪನಿ ಮಾಲೀಕ ರಾಜಲಕ್ಷ್ಮಣ ಎನ್ನುವವರು ಬೆಂಗಳೂರಿನ ಸಿಬಿಐ ಕಚೇರಿಗೆ ದೂರು ನೀಡಿದ್ದರು. ಬುಧವಾರ ಬೆಳಗಾವಿಗೆ ಬಂದ ಸಿಬಿಐ ತಂಡ, ಭ್ರಷ್ಟಾಚಾರ ನಿಗ್ರಹ ದಳದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದರು. ದೂರುದಾರರಿಂದ ₹5 ಲಕ್ಷ ಹಣ ಸ್ವೀಕರಿಸುವಾಗ ಆರೋಪಿಗಳನ್ನು ಬಂಧಿಸಲಾಗಿತ್ತು. 

ಗುರುವಾರ ಆರೋಪಿಗಳನ್ನು ಇಲ್ಲಿನ 3ನೇ ಹೆಚ್ಚುವರಿ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಮಧ್ಯೆ, ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ತಕರಾರು ಅರ್ಜಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು