ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧ: ಹರ್ಷವರ್ಧನ್

ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪ್ರಧಾನಿ ನರೇಂದ್ರ ಮೋದಿಯವರ ‘ಮಹಿಳೆಯರ ನೇತೃತ್ವದ ಭಾರತ’ ದೃಷ್ಟಿಕೋನವನ್ನು ವಿಜ್ಞಾನ ಜ್ಯೋತಿ ಕಾರ್ಯಕ್ರಮದ ಮೂಲಕ ಮತ್ತಷ್ಟು ಉತ್ತೇಜಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಹೆಣ್ಣು ಮಕ್ಕಳ ರಾಷ್ಟ್ರೀಯ ದಿನದ ಅಂಗವಾಗಿ ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ಸಬಲೀಕರಣದ ನಿಟ್ಟಿನಲ್ಲಿ ಮಾಡಿರುವ ಸಾಧನೆ ಮತ್ತು ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ್ದಾರೆ. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
‘ದೇಶದ ಹೆಣ್ಣು ಮಕ್ಕಳನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್ಟಿಇಎಂ–ಸ್ಟೆಮ್) ಕ್ಷೇತ್ರಗಳತ್ತ ಆಕರ್ಷಿಸಲು ಹಾಗೂ ಸ್ಟೆಮ್ ಶಿಕ್ಷಣ ಮೌಲ್ಯ ಹೆಚ್ಚಿಸುವ ವಿಜ್ಞಾನ ಜ್ಯೋತಿ ಕಾರ್ಯಕ್ರಮವನ್ನು ನಾವು ಶಾಲಾ ಮಟ್ಟದಲ್ಲಿ ಆರಂಭಿಸಿದ್ದೇವೆ. ಸಂಶೋಧನೆ ಮತ್ತು ವೃತ್ತಿಜೀವನದ ಅವಕಾಶಗಳನ್ನು ಒದಗಿಸುವ ನಮ್ಮ ‘ಮಹಿಳಾ ವಿಜ್ಞಾನಿಗಳ ಯೋಜನೆ’ ಅಡಿಯಲ್ಲಿ ಸುಮಾರು 1,400 ಮಹಿಳಾ ವಿಜ್ಞಾನಿಗಳು ಕಳೆದ ಮೂರು ವರ್ಷಗಳಲ್ಲಿ ಲಾಭ ಪಡೆದಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹೆಣ್ಣುಮಕ್ಕಳ ಸ್ಟೆಮ್ ಕಲಿಕೆಗೆ ಉತ್ತೇಜನ ನೀಡಲು ಮತ್ತು ಅವರನ್ನು ಸ್ಟೆಮ್ ವೃತ್ತಿಗಳತ್ತ ಸೆಳೆಯಲು ‘ವಿಜ್ಞಾನ ಜ್ಯೋತಿ’ ಕಾರ್ಯಕ್ರಮವನ್ನು 2019ರಲ್ಲಿ ಆರಂಭಿಸಿತು.
ಮತ್ತೊಂದು ಟ್ವೀಟ್ನಲ್ಲಿ ಕೆಐಆರ್ಎಎನ್ (ಪೋಷಣೆಯ ಮೂಲಕ ಸಂಶೋಧನಾ ಪ್ರಗತಿಯಲ್ಲಿ ಜ್ಞಾನದ ತೊಡಗಿಸಿಕೊಳ್ಳುವಿಕೆ) ಯೋಜನೆ ಬಗ್ಗೆ ಪ್ರಸ್ತಾಪಿಸಿರುವ ಸಚಿವರು, ಈ ಯೋಜನೆಯ ಮೂಲಕ ಕಳೆದ ಐದು ಹಾಗೂ ಪ್ರಸ್ತುತ ವರ್ಷದಲ್ಲಿ ಸುಮಾರು 2,200 ಮಹಿಳಾ ವಿಜ್ಞಾನಿಗಳು ‘ಆತ್ಮನಿರ್ಭರ ಭಾರತ್’ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೆಣ್ಣುಮಕ್ಕಳ ವಿಚಾರದಲ್ಲಿ ಸಮಾಜವನ್ನು ಮತ್ತಷ್ಟು ಜಾಗೃತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರತಿವರ್ಷ ಜನವರಿ 24ನ್ನು ಹೆಣ್ಣು ಮಕ್ಕಳ ರಾಷ್ಟ್ರೀಯ ದಿನವನ್ನಾಗಿ ಆಚರಿಸುವುದಾಗಿ 2008ರಲ್ಲಿ ಘೋಷಿಸಿದೆ.
At @IndiaDST, we're furthering the vision of our Hon'ble PM Sh @narendramodi Ji of establishing an empowered women led #NewIndia
To attract #DeshKiBeti into STEM fields, we have started Vigyan Jyoti – School Component which is adding value in STEM education at school level.
— Dr Harsh Vardhan (@drharshvardhan) January 24, 2021
We have been making active interventions to improve nutrition of our #DeshKiBeti through special focus on dietetics of girls under initiatives like 'Poshan Abhiyan'
Under Anaemia Mukt Bharat Programme, Iron Folic acid tablets are being given to children, adolescents & women.
— Dr Harsh Vardhan (@drharshvardhan) January 24, 2021
The progress of a community is measured by the degree of prosperity its women & girls achieve.
To facilitate the progress of our #DeshKiBeti, @MoHFW_INDIA is committed to address gender disparity in health as one of the priority areas under the National Health Policy.
— Dr Harsh Vardhan (@drharshvardhan) January 24, 2021
Under @IndiaDST's ‘Knowledge Involvement in Research Advancement through Nurturing (KIRAN)’ Scheme, more than 2200 women scientists & technologists in the last five years and current year have been working to build a strong and #AatmaNirbharBharat#DeshKiBeti
— Dr Harsh Vardhan (@drharshvardhan) January 24, 2021
Giving wings to the dreams of each #DeshKiBeti a historic Samagra Shiksha Scheme has been launched by @EduMinOfIndia
Among other spectacular initiatives under the scheme, Rs 1,47,250 lakh is estimated to be spent on vocational eduction which will benefit 5.22 lakh girl students pic.twitter.com/h1pIQkF9Da
— Dr Harsh Vardhan (@drharshvardhan) January 24, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.