ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ವೇಳೆ ಕೆಲಸ ಕಳೆದುಕೊಂಡಿದ್ದ ವ್ಯಕ್ತಿಯಿಂದ ದರೋಡೆ ಯತ್ನ, ವೃದ್ಧೆ ಕೊಲೆ

Last Updated 14 ಆಗಸ್ಟ್ 2021, 4:14 IST
ಅಕ್ಷರ ಗಾತ್ರ

ಚಂಡೀಗಡ: 98 ವರ್ಷದ ವೃದ್ಧೆಯನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು (31) ಬಂಧಿಸುವಮೂಲಕ ಪ್ರಕರಣದ ರಹಸ್ಯವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಚಂಡೀಗಡ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನೀಡಿರುವಮಾಹಿತಿ ಪ್ರಕಾರ, ಕೋವಿಡ್‌ ನಿಯಂತ್ರಣದ ಸಲುವಾಗಿ ಲಾಕ್‌ಡೌನ್ ಜಾರಿಗೊಳಿಸಿದ್ದ ವೇಳೆ ಕೆಲಸ ಕಳೆದುಕೊಂಡಿದ್ದ ಬಂಧಿತ, ವೃದ್ಧೆಯ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಲು ಆಗಸ್ಟ್‌6 ತೆರಳಿದ್ದ. ಈ ವೇಳೆ ಎಚ್ಚೆತ್ತುಕೊಂಡು ಗಲಾಟೆ ಮಾಡಿದ್ದ ವೃದ್ಧೆಯನ್ನು ಹತ್ತೆ ಮಾಡಿದ್ದ ಎನ್ನಲಾಗಿದೆ.

ವೃದ್ಧ ಮಹಿಳೆಯನ್ನು ಜೋಗಿಂದರ್‌ ಕೌರ್‌ ಎನ್ನಲಾಗಿದ್ದು, ಒಂಟಿಯಾಗಿ ವಾಸಿಸುತ್ತಿದ್ದರು. ದರೋಡೆ ಯತ್ನದ ವೇಳೆ ಆಕೆಯ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಲಾಗಿತ್ತು. ಆದಾಗ್ಯೂ ಮನೆಯಲ್ಲಿ ಬೆಲೆಬಾಳುವ ಯಾವುದೇ ವಸ್ತುಗಳು ಕಾಣೆಯಾಗಿರಲಿಲ್ಲ.ಕೆಲಸದವರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಈ ಸಂಬಂಧ ಇಲ್ಲಿನ ಸೆಕ್ಟರ್‌-3 ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಬಂಧಿತನನ್ನು ಕೈಲಾಶ್ ಭಟ್‌ ಎಂದು ಗುರುತಿಸಲಾಗಿದೆ.ಉತ್ತರಾಖಂಡ್‌ನ ಅಲ್ಮೋರಾದಿಂದ ಬಂದಿದ್ದ ಈತ ಸೆಕ್ಟರ್‌-15ರ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಹತ್ಯೆಗೆ ಬಳಸಲಾಗಿದ್ದ ಚಾಕುವನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್‌ಡೌನ್‌ ವೇಳೆ ಕೆಲಸ ಕಳೆದುಕೊಂಡಿದ್ದ ಬಂಧಿತನಿಗೆ, ಬಹುದಿನಗಳವರೆಗೆ ಯಾವುದೇ ಕೆಲಸವಿರಲಿಲ್ಲ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕುಲದೀಪ್‌ ಸಿಂಗ್‌ ಚಹಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT