ಮಂಗಳವಾರ, ಮಾರ್ಚ್ 21, 2023
29 °C

ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ,ಆನ್‌ಲೈನ್‌ ಅಪ್‌ಲೋಡ್‌ ಅಗತ್ಯವಿಲ್ಲ:‘ಸುಪ್ರೀಂ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ‘ಕ್ರಿಮಿನಲ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಸಲ್ಲಿಸಲಾಗುವ ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ. ಉಚಿತವಾಗಿ ಲಭ್ಯವಾಗುವಂತೆ ಇದನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆರೋಪಪಟ್ಟಿಗಳು ಸಾರ್ವಜನಿಕವಾಗಿ ಸಿಗುವಂತೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠವು ಶುಕ್ರವಾರ ವಜಾ ಮಾಡಿತು.

‘ಆರೋಪಪಟ್ಟಿಗಳನ್ನು ಅಪ್‌ಲೋಡ್ ಮಾಡುವುದು ಕ್ರಿಮಿನಲ್‌ ಅಪರಾಧ ಸಂಹಿತೆ (ಸಿಆರ್‌ಪಿಸಿ) ನಿಯಮಗಳಿಗೂ ವಿರುದ್ಧವಾದುದು’ ಎಂದು ಪೀಠವು ಅಭಿಪ್ರಾಯಪಟ್ಟಿತು.

ಎನ್‌ಜಿಒ ಅಥವಾ ಇತರೆ ಸಂಸ್ಥೆಗಳು ಸೇರಿದಂತೆ ಸಂಬಂಧಿಸಿದಲ್ಲದವರಿಗೆ ಆರೋಪಪಟ್ಟಿ ದೊರೆತಲ್ಲಿ ಅದು ದುರ್ಬಳಕೆ ಆಗುವ ಸಾಧ್ಯತೆಗಳು ಇರುತ್ತವೆ ಎಂದು ಪೀಠವು ಮೌಖಿಕವಾಗಿ ಅಭಿಪ್ರಾಯಪಟ್ಟಿತು. 

ಸ್ವಯಂ ಪ್ರೇರಿತವಾಗಿ ಮಾಹಿತಿ ಪ್ರಕಟಿಸುವುದು ಸಾರ್ವಜನಿಕ ಸೇವಾ ಸಂಸ್ಥೆಗಳ ಕರ್ತವ್ಯ. ಅಪರಾಧವನ್ನು ಯಾರು ಎಸಗಿದ್ದಾರೆ, ಆರೋಪಿ ಯಾರು ಎಂದು ತಿಳಿಯುವ ಹಕ್ಕು ಪ್ರತಿ ನಾಗರಿಕನಿಗೂ ಇದೆ ಎಂದು ವಕೀಲ ಪ್ರಶಾಂತ್ ಭೂಷಣ್‌ ಪ್ರತಿಪಾದಿಸಿದ್ದರು.  

ಸಿಆರ್‌ಪಿಸಿ ಸೆಕ್ಷನ್ 173ರ ಅನ್ವಯ ಪೊಲೀಸರು ದಾಖಲಿಸುವ ಎಫ್‌ಐಆರ್‌ಗಳು ಉಚಿತವಾಗಿ ಸಾರ್ವಜನಿಕವಾಗಿ ಸಿಗುವಂತಿರಬೇಕು ಎಂದು ಕೋರಿ ಪತ್ರಕರ್ತ ಸೌರವ್‌ ದಾಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು