ಶನಿವಾರ, ಜುಲೈ 24, 2021
21 °C

ಛತ್ತೀಸಗಡ: ₹2.20 ಕೋಟಿ ಮೌಲ್ಯದ ಗಾಂಜಾ ವಶ, ಆರೋಪಿಗಳಿಬ್ಬರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಹಾಸಮುಂಡ್: ‘ಛತ್ತೀಸಗಡದ ಮಹಾಸಮುಂಡ್ ಜಿಲ್ಲೆಯಲ್ಲಿ ಟ್ರಕ್‌ವೊಂದರಿಂದ ₹2.20 ಕೋಟಿ ಮೌಲ್ಯದ 1.1 ಟನ್‌ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ‌ಶಂಕಿತ ಕಳ್ಳಸಾಗಣೆದಾರರಿಬ್ಬರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

‘ಒಡಿಶಾದಿಂದ ಉತ್ತರ ಪ್ರದೇಶಕ್ಕೆ ಟ್ರಕ್‌ವೊಂದರಲ್ಲಿ ಹಲಸಿನ ಹಣ್ಣುಗಳ ಕೆಳಗೆ ಗಾಂಜಾವನ್ನು ಅಡಗಿಸಿ ಸಾಗಿಸಲಾಗುತ್ತಿತ್ತು. ತೆಮ್ರಿ ನಾಕಾದಲ್ಲಿ ಪರಿಶೀಲನೆ ವೇಳೆ ಟ್ರಕ್‌ನಲ್ಲಿ ಗಾಂಜಾ ಪತ್ತೆಯಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪ್ರಫುಲ್‌ ಠಾಕೂರ್‌ ಅವರು ಮಾಹಿತಿ ನೀಡಿದರು.

ಈ ಪ್ರಕರಣ ಸಂಬಂಧ ಟ್ರಕ್‌ ಚಾಲಕ ದೇವೇಂದ್ರ ಸಿಂಗ್‌ ಮತ್ತು ಆತನ ಸಹಾಯಕ ಬಲ್ಬೀರ್‌ ಸಿಂಗ್‌ನನ್ನು ಬಂಧಿಸಲಾಗಿದೆ. ಇವರಿಬ್ಬರು ಮೂಲತಃ ಆಲಿಗಢದವರು. ಆರೋಪಿಗಳ ಬಳಿಯಿಂದ ಗಾಂಜಾ, ₹20 ಸಾವಿರ ನಗದು ಮತ್ತು ಟ್ರಕ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ... ಚೀನಾ ಗಡಿ ತಂಟೆ: ಗಾಲ್ವನ್ ಕಣಿವೆ ಸಂಘರ್ಷ, ಯೋಧರ ಬಲಿದಾನಕ್ಕೆ ವರ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು