ಮಂಗಳವಾರ, ಏಪ್ರಿಲ್ 20, 2021
29 °C

ಟ್ರೈನಿ ಗಗನಸಖಿಗೆ ಕಿರುಕುಳ: ವಿದ್ಯಾರ್ಥಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ(ಪಿಟಿಐ): 20ರ ಹರೆಯದ ತರಬೇತಿ ನಿರತ ಗಗನಸಖಿಯೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಿಸುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ 12ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ದೆಹಲಿಯ ಕೃಷ್ಣನಗರದ ನಿವಾಸಿಯಾದ 17 ವರ್ಷದ ಬಾಲಾಪರಾಧಿಯನ್ನು ಬಂಧಿಸಿ, ಬಾಲ ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಯುವತಿ ದೂರು ನೀಡಿದ ಐದು ತಾಸುಗಳೊಳಗೆ ಬಾಲಾಪರಾಧಿಯನ್ನು ಪತ್ತೆಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

‘ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ವ್ಯಕ್ತಿಯು ನನ್ನನ್ನು ಹಿಂಬಾಲಿಸುತ್ತಿದ್ದು, ಆತ ಸಾಮಾಜಿಕ ಜಾಲತಾಣದ ಪೋರ್ಟಲ್‌ನ ಮೆಸೆಂಜರ್‌ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾನೆ ಮತ್ತು ಆತನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದಾನೆ’ ಎಂದು ಆರೋಪಿಸಿ, ಗಗನಸಖಿ ಕೋರ್ಸ್ ಕಲಿಕಾರ್ಥಿ ಯುವತಿ ದೂರು ನೀಡಿದ್ದರು.

ದೂರನ್ನು ಪರಿಶೀಲಿಸಿದಾಗ ಆರೋಪಿ ನಕಲಿ ಇಮೇಲ್ ಬಳಸಿ ಇಮೇಲ್ ಕಳುಹಿಸಿರುವುದು ಕಂಡುಬಂದಿದೆ. ಆರೋಪಿ ಮೂರುನಾಲ್ಕು ದಿನಗಳು ತುಂಬಾ ಕಿರುಕುಳ ನೀಡಿದ ಎಂದು ಯುವತಿ ಹೇಳಿಕೆ ನೀಡಿದ್ದಾರೆ. ಯುವತಿಯ ದೂರಿನ ಮೇರೆಗೆ ಆರೋಪಿಯ ವಿರುದ್ಧ ಜಗತ್‌ಪುರಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 (ಡಿ) (ಹಿಂಬಾಲಿಸುವುದು), 506 (ಬೆದರಿಕೆ) ಹಾಗೂ 509ರಡಿ (ಮಹಿಳೆಯ ಗೌರವಕ್ಕೆ ಚ್ಯುತಿ ತರುವುದು) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಆರ್‌.ಸಾತಿಯಾಸುಂದರಮ್‌ ತಿಳಿಸಿದ್ದಾರೆ.

‘ಇಮೇಲ್ ಐಡಿ ವಿಶ್ಲೇಷಿಸಿದಾಗ, ಆರೋಪಿಯು ಇಮೇಲ್ ಖಾತೆ ಪ್ರವೇಶಿಸಲು ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಬಳಸಿರುವುದು ಕಂಡುಬಂದಿದೆ. ತಾಂತ್ರಿಕ ಕಣ್ಗಾವಲು ಮತ್ತು ಸೈಬರ್ ಫೊರೆನ್ಸಿಕ್ ಉಪಕರಣಗಳ ನೆರವಿನಿಂದ ಸಂಗ್ರಹಿಸಿದ ಮಾಹಿತಿಯಿಂದ ಆಪಾದಿತ ಪ್ರೊಫೈಲ್ ಬಳಕೆದಾರನ ಗುರುತನ್ನು ಪತ್ತೆ ಹಚ್ಚಲಾಯಿತು’ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು