ಭಾನುವಾರ, ಜೂನ್ 26, 2022
25 °C

ಕುಡುಕ ಸ್ನೇಹಿತ ಕೊಟ್ಟ ಅರೆಬರೆ ಸುಳಿವು: ಕೊಲೆಗಾರರ ಸೆರೆ ಹಿಡಿದ ಪೊಲೀಸರು

ಪಿಟಿಐ Updated:

ಅಕ್ಷರ ಗಾತ್ರ : | |

ನೋಯ್ಡಾ: ಕುಡುಕ ಸ್ನೇಹಿತ ಅರೆಬರೆ ನೆನಪಿಟ್ಟುಕೊಂಡಿದ್ದ ಗಾಡಿ ನಂಬರ್‌, ಬಣ್ಣದ ಸಹಾಯದಿಂದ ಕೊಲೆಗಾರರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಮೇ 14ರಂದು ಕ್ಷುಲ್ಲಕ ಕಾರಣಕ್ಕೆ 23 ವರ್ಷದ ಯುವಕನನ್ನು ಸಿಮೆಂಟ್‌ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ರಾತ್ರಿ ವೇಳೆ, ನಿರ್ಜನ ಪ್ರದೇಶದಲ್ಲಿ ನಡೆದಿದ್ದ ಕೃತ್ಯದ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಭಾಂಗೆಲ್‌ ಪ್ರದೇಶದ ಅಭಯ್‌ ತ್ಯಾಗಿ ಮತ್ತು ಆತನ ಇಬ್ಬರು ಸ್ನೇಹಿತರು ಮದ್ಯ ಸೇವಿಸಿ ಮನೆಗೆ ವಾಪಸ್‌ ಆಗುತ್ತಿದ್ದರು. ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರ ಜೊತೆ ಜಗಳ ನಡೆದಿದ್ದು, ತ್ಯಾಗಿಯ ಕೊಲೆಯೊಂದಿಗೆ ಅಂತ್ಯ ಕಂಡಿತ್ತು. ಬೈಕ್‌ನಲ್ಲಿ ಬಂದಿದ್ದ ಮೂವರೂ ಸ್ಥಳದಿಂದ ಪರಾರಿಯಾಗಿದ್ದರು.

ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ತ್ಯಾಗಿಯ ಸ್ನೇಹಿತನೊಬ್ಬ ಗಾಡಿಯ ಅರ್ಧ ನಂಬರ್‌ ಮತ್ತು ಕಪ್ಪು ಬಣ್ಣದ ಬೈಕ್‌ ಎಂಬುದನ್ನು ನೆನಪಿಟ್ಟುಕೊಂಡಿದ್ದ. ಅದರ ಆಧಾರದಲ್ಲಿ ಕೊಲೆಗಾರರ ಬೆನ್ನು ಬಿದ್ದ ಪೊಲೀಸರು ನೂರಾರು ಪೈಕ್‌ಗಳನ್ನು ಪರಿಶೀಲಿಸಿ ಅಂತಿಮವಾಗಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು