ಮಂಗಳವಾರ, ಸೆಪ್ಟೆಂಬರ್ 22, 2020
24 °C

ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕನ ವಿರುದ್ಧ ಆರು ಪ್ರಕರಣ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಹಟಿ: 'ಚಿಂತಕ, ಕವಿ ಸೈಯದ್ ಅಬ್ದುಲ್ ಮಲ್ಲಿಕ್ ಅವರು`ಬೌದ್ಧಿಕ ಜಿಹಾದ್' ಎಂದು ಟೀಕಿಸಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಾಗಿ ಅಸ್ಸಾಂನ ಬಿಜೆಪಿ ಶಾಸಕ ಶೈಲಾದಿತ್ಯ ದೇವ್ ವಿರುದ್ಧ ವಿವಿಧ ಸಂಘಟನೆಗಳು ಆರಕ್ಕೂ ಹೆಚ್ಚು ಮೊಕದ್ದಮೆ ದಾಖಲಿಸಿವೆ.

ಬಿಜೆಪಿ ಮುಖಂಡ, ಅಸ್ಸಾಂನ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮುಮಿನುಲ್ ಅವೊಲ್ ಅವರೂ ಶಾಸಕರ ಹೇಳಿಕೆ ಖಂಡಿಸಿದ್ದು ಸಾರ್ವಜನಿಕ ಕ್ಷಮೆಗೆ ಆಗ್ರಹಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ದೇವ್ ಅವರು 'ಮಾನಸಿಕ ಸ್ಥಿಮಿತ' ಇಲ್ಲದ ವ್ಯಕ್ತಿ. ಅವರನ್ನು ಮನೋರೋಗ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಬೇಕು ಎಂದು ಒತ್ತಾಯಿಸಿದೆ.

ವಿವಾದಾತ್ಮಕ ಹೇಳಿಕೆಗಳಿಗಾಗೇ ಹೆಸರಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ದೇವ್ ಅವರನ್ನು `ಬಿಜೆಪಿಯ ರಾಖಿ ಸಾವಂತ್' ಎಂದೂ ಟೀಕಿಸಿದೆ. ದೇವ್ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಠಾಣೆಗೆ ದೂರು ನೀಡಿದ್ದು ಶಾಸಕರವಿರುದ್ಧ ತಕ್ಷಣ ಕ್ರಮಜರುಗಿಸಬೇಕು ಎಂಧು ಒತ್ತಾಯಿಸಿದೆ. ಸಾದೋ ಅಸ್ಸಾಂ ಗೊರಿಯಾ, ಮೊರಿಯಾ ದೇಶಿ ಜಾತಿಯಾ ಪರಿಷತ್ ಕೂಡಾ ಶಾಸಕರ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದೆ. ಬಿಜೆಪಿ ಮುಖಂಡರೂ ಶಾಸಕರ ಕ್ಷಮೆಗೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು