ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಭಾಷೆ ಬಲ್ಲವರ ಸಮೀಕ್ಷೆ ನಡೆಸಲು ಸೂಚನೆ; ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು

ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು
Last Updated 20 ಮಾರ್ಚ್ 2021, 18:27 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಎಷ್ಟು ಮಂದಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ, ಓದುತ್ತಾರೆ ಮತ್ತು ಬರೆಯುತ್ತಾರೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸುವಂತೆ ಸಂಸದೀಯ ಸ್ಥಾಯಿ ಸಮಿತಿಯು ಗೃಹ ಸಚಿವಾಲಯಕ್ಕೆ ಸೂಚಿಸಿದ್ದು, ಹಿಂದಿಯಲ್ಲಿ ಬಳಸುವ ಸಾಮಾನ್ಯ ಪದಗಳನ್ನೊಳಗೊಂಡ ಭಾರತೀಯ ಭಾಷೆಗಳ ನಿಘಂಟು ರಚಿಸಲು ಹೇಳಿದೆ.

‘ಇದುವರೆಗೆ ಸಚಿವಾಲಯದ ಭಾಷಾ ಇಲಾಖೆಯು ಇಂಥ ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ’ ಎಂದು ತಿಳಿಸಿರುವ ಗೃಹ ಸಚಿವಾಲಯವು, 2011ರಲ್ಲಿ ನಡೆದ ಸಮೀಕ್ಷೆಯಲ್ಲಿ 52.83 ಕೋಟಿ ಜನರು ಹಿಂದಿಯನ್ನು ಮಾತನಾಡುತ್ತಾರೆ ಎನ್ನುವ ಅಂಕಿಅಂಶದ ಕುರಿತು ಗಮನ ಸೆಳೆದಿದೆ.

‘ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಯಾವುದಾದರೂ ಯೋಜನೆ ಸರ್ಕಾರಕ್ಕೆ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ಭಾರತದ ಸಂವಿಧಾನದ 343 (1)ನೇ ವಿಧಿ ಪ್ರಕಾರ, ದೇವನಾಗರಿ ಲಿಪಿಯ ಹಿಂದಿ ಭಾಷೆಯು ಅಧಿಕೃತ ಭಾಷೆಯಾಗಿರಬೇಕು. ಆದರೆ, ಸಂವಿಧಾನವು ಯಾವುದೇ ರಾಷ್ಟ್ರಭಾಷೆಯನ್ನು ಸೂಚಿಸಿಲ್ಲ’ ಎಂದು ಗೃಹಸಚಿವಾಲಯವು ಸ್ಪಷ್ಟಪಡಿಸಿದೆ.

‘ಒಕ್ಕೂಟದ ಆಡಳಿತಾತ್ಮಕ ಉದ್ದೇಶಗಳಿಗಾಗಿ ಹಿಂದಿ ಭಾಷೆಯ ಬಳಕೆಯ ಉತ್ತೇಜನದ ಕುರಿತು ಹಾಗೂ ಅಧಿಕೃತ ಭಾಷೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳ ಕುರಿತು’ ಕೇಂದ್ರ ಗೃಹ ಸಚಿವಾಲಯದ ಭಾಷಾ ಇಲಾಖೆಯು ಮಾಹಿತಿಯನ್ನು ನೀಡುತ್ತದೆ.

ಹಿಂದಿ ಭಾಷೆಯ ಬಳಕೆಯ ಕುರಿತು ಸಮೀಕ್ಷೆ ನಡೆಸಲು ಸಂಬಂಧಪಟ್ಟ ಭಾಷಾ ಇಲಾಖೆಯನ್ನು ಬಳಸಿಕೊಳ್ಳಬಹುದು ಎಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

ಹಿರಿಯ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಅವರ ನೇತೃತ್ವದ ಸಮಿತಿಯು, ಹಿಂದಿ ಮತ್ತು ಇತರ ಭಾಷೆಗಳಲ್ಲಿ ಬಳಸುವ ಸಮಾನಾರ್ಥಕ ಪದಗಳನ್ನೊಳಗೊಂಡ ನಿಘಂಟನ್ನು ರೂಪಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT