ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಬಾಳ ಸಂಗಾತಿ ಕುರಿತು ಕೊನೆಗೂ ಮನಬಿಚ್ಚಿ ಮಾತನಾಡಿದ್ದಾರೆ.

ಭಾರತ್ ಜೋಡೊ ಯಾತ್ರೆ ವೇಳೆಯಲ್ಲಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಅಜ್ಜಿ ಇಂದಿರಾ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ಗುಣಗಳನ್ನು ಹೊಂದಿರುವ ಸಂಗಾತಿಯೊಂದಿಗೆ ಜೀವನ ನಡೆಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಈ ಮೂಲಕ ವೈಯಕ್ತಿಕ ಜೀವನದ ಕುರಿತು ಮಾಹಿತಿಗಳನ್ನು ರಾಹುಲ್ ಗಾಂಧಿ ಹಂಚಿದ್ದಾರೆ.

ಇದನ್ನೂ ಓದಿ:ಭಾರತ್ ಜೋಡೊ ಯಾತ್ರೆ: ರಾಹುಲ್ ಭದ್ರತೆಯಲ್ಲಿ ಲೋಪ

ಇದೊಂದು ಆಸಕ್ತಿದಾಯಕ ಪ್ರಶ್ನೆ. ನನ್ನ ಬಾಳ ಸಂಗಾತಿಗೆ ತಾಯಿ ಮತ್ತು ಅಜ್ಜಿಯ ಗುಣಗಳ ಮಿಶ್ರಣ ಹೊಂದಿದ್ದರೆ ಉತ್ತಮ ಎಂದು ಅವರು ತಿಳಿಸಿದರು.

ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 'ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ' ಎಂದು ರಾಹುಲ್ ಹೇಳಿದರು.

ಕಾರುಗಳ ಬಗ್ಗೆ ಆಸಕ್ತಿಯಿಲ್ಲ...
ಸಂದರ್ಶನದ ವೇಳೆ ಕಾರುಗಳ ಮೇಲೆ ತನಗೆ ಆಸಕ್ತಿಯಿಲ್ಲ. ಸ್ವಂತ ಕಾರನ್ನು ಹೊಂದಿಲ್ಲ ಎಂದು ಹೇಳಿದರು. ನನ್ನ ಬಳಿ ಸಿಆರ್-ವಿ ಕಾರು ಇದ್ದು, ಅದು ತಾಯಿಯದ್ದಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.