ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಿಂದ ಬಂದ 30 ಲಕ್ಷ ಡೋಸ್‌ ಸ್ಪುಟ್ನಿಕ್ ವಿ ಲಸಿಕೆಗಳು

Last Updated 1 ಜೂನ್ 2021, 11:26 IST
ಅಕ್ಷರ ಗಾತ್ರ

ಹೈದರಾಬಾದ್: ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಕೋವಿಡ್‌ ಲಸಿಕೆಯ 30 ಲಕ್ಷ ಡೋಸ್‌ಗಳು ಮಂಗಳವಾರ ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿವೆ.

ರಷ್ಯಾದಿಂದ ಲಸಿಕೆ ಹೊತ್ತ ವಿಶೇಷ ಚಾರ್ಟರ್ಡ್ ಸರಕು ಸಾಗಣೆಯ ವಿಮಾನ ಹೈದರಾಬಾದ್ ವಿಮಾನ ನಿಲ್ದಾಣವನ್ನು 3.43 ಗಂಟೆಗೆ ಬಂದು ತಲುಪಿದೆ ಎಂದು ಜಿಎಂಆರ್ ಹೈದರಾಬಾದ್ ಏರ್ ಕಾರ್ಗೋ (ಜಿಎಚ್‌ಎಸಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಜಿಎಚ್‌ಎಸಿ ಈಗಾಗಲೇ ಹಲವಾರು ಲಸಿಕೆಗಳ ಆಮದು ಸಾಗಣೆಯನ್ನು ನಿಭಾಯಿಸಿದೆ. 56.6 ಟನ್ ಲಸಿಕೆಗಳನ್ನು ಏಕಕಾಲಕ್ಕೆ ಭಾರತಕ್ಕೆ ಆಮದು ಮಾಡಿಕೊಂಡಿದ್ದು, ಇಂದಿನ ದಿನಗಳಲ್ಲಿ ಇದು ಅತಿದೊಡ್ಡ ಆಮದು ಸಾಗಣೆ ಎನಿಸಿದೆ. ಈ ಆಮದು ಸಾಗಣೆಯ ಎಲ್ಲ ಪ್ರಕ್ರಿಯೆಗಳು ಮತ್ತು ಲಸಿಕೆ ರವಾನೆಯ ಪ್ರಕ್ರಿಯೆಗಳು ಕೇವಲ 90 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಅದು ತಿಳಿಸಿದೆ.

ಸ್ಪುಟ್ನಿಕ್ ವಿ ಲಸಿಕೆಗೆ ವಿಶೇಷ ನಿರ್ವಹಣೆ ಮತ್ತು ಸಂಗ್ರಹಣೆಯ ಅಗತ್ಯವಿದ್ದು, ಇದನ್ನು -20 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಇಡಬೇಕಾಗುತ್ತದೆ.

ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್‌ ವಿ ಲಸಿಕೆಯ ತುರ್ತು ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರದಿಂದ ಅನುಮೋದನೆ ಪಡೆದಿದೆ. ದೇಶದಲ್ಲಿ ಮೊದಲ 25 ಕೋಟಿ ಡೋಸ್‌ ಲಸಿಕೆಯ ಪೂರೈಕೆಗೆ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ರಷ್ಯಾದ ನೇರ ಹೂಡಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಹಿಂದೆ ಆರ್‌ಡಿಐಎಫ್‌ನಿಂದ ಎರಡು ಲಕ್ಷ ಲಸಿಕೆಗಳನ್ನು ಪಡೆದಿದ್ದ ಡಾ. ರೆಡ್ಡೀಸ್, ಸ್ಫುಟ್ನಿಕ್‌ ವಿ ಲಸಿಕೆಯನ್ನು ಪ್ರಾಯೋಗಿಕವಾಗಿ ಹಾಕಲು ಅಪೊಲೊ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT