ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 15 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕಿಲ್ಲ 2ನೇ ಕೋವಿಡ್‌ ಲಸಿಕೆ

Last Updated 1 ಅಕ್ಟೋಬರ್ 2021, 7:18 IST
ಅಕ್ಷರ ಗಾತ್ರ

ನವದೆಹಲಿ:ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಷ್ಟ್ರದಲ್ಲಿಕೋವಿಡ್‌ಲಸಿಕೆಆರಂಭಿಸಿ 9 ತಿಂಗಳುಗಳೇ ಕಳೆದಿವೆ. ಆದರೆಇನ್ನೂಸುಮಾರು15ಲಕ್ಷಆರೋಗ್ಯಕಾರ್ಯಕರ್ತರಿಗೆ2ನೇ ಡೋಸ್‌ಲಸಿಕೆಸಿಕ್ಕಿಲ್ಲ.

ಕೇಂದ್ರ ಸರ್ಕಾರಆರೋಗ್ಯಕಾರ್ಯಕರ್ತರನ್ನುಕೋವಿಡ್‌ ವಾರಿಯರ್ಸ್‌ ಎಂದು ಪರಿಗಣಿಸಿ, ಮೊದಲ ಪ್ರಾತಿನಿಧ್ಯವಾಗಿ ಜನವರಿ ತಿಂಗಳಲ್ಲಿಲಸಿಕೆನೀಡಲು ಆರಂಭಿಸಿತು. ಈ ಪೈಕಿ ವೈದ್ಯರು, ನರ್ಸ್‌ಗಳು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಗಳು ಸೇರಿದ್ದಾರೆ.

ಸೆಪ್ಟೆಂಬರ್‌ 30ರ ವರೆಗಿನ ಅಂಕಿಅಂಶದ ಪ್ರಕಾರ ಸುಮಾರು ಶೇ 85ರಷ್ಟುಆರೋಗ್ಯಕಾರ್ಯಕರ್ತರಿಗೆಎರಡು ಡೋಸ್‌ಕೋವಿಡ್‌ಲಸಿಕೆನೀಡಲಾಗಿದೆ. ಸೋಂಕು ಹರಡಬಹುದಾದ ಸಂಭವನೀಯ ಸ್ಥಳಗಳಲ್ಲೇ ಕಾರ್ಯ ನಿರ್ವಹಿಸುತ್ತಿರುವಇನ್ನೂ15ಲಕ್ಷಆರೋಗ್ಯಕಾರ್ಯಕರ್ತರಿಗೆಕೋವಿಡ್‌ ಲಸಿಕೆಯ 2ನೇ ಡೋಸ್‌ ಸಿಕ್ಕಿಲ್ಲ.

ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿಕೋವಿಡ್‌ಲಸಿಕೆಪಡೆದಆರೋಗ್ಯಕಾರ್ಯಕರ್ತರ ಸಂಖ್ಯೆ ತುಂಬ ಕಡಿಮೆ ಇದೆ. ಕೋವಿನ್‌ ವ್ಯವಸ್ಥೆಯ ಮೂಲಕ 2ನೇಲಸಿಕೆಪಡೆಯದಆರೋಗ್ಯಸಿಬ್ಬಂದಿಯನ್ನು ಗುರುತಿಸಿ, ತುರ್ತಾಗಿಲಸಿಕೆಲಭಿಸುವಂತೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರಆರೋಗ್ಯಸಚಿವ ರಾಜೇಶ್‌ ಭೂಷಣ್‌ ಗುರುವಾರ ತಿಳಿಸಿದ್ದಾರೆ.

ಈಗಾಗಲೇ ಶೇ 99ರಷ್ಟುಆರೋಗ್ಯಕಾರ್ಯಕರ್ತರುಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಒಟ್ಟಾರೆಇನ್ನೂಸುಮಾರು15ಲಕ್ಷವೈದ್ಯಕೀಯ ಸಿಬ್ಬಂದಿ 2ನೇ ಡೋಸ್‌ ಪಡೆಯಬೇಕಿದೆ. 9 ತಿಂಗಳೇ ಕಳೆದರೂ, ಮೊದಲ ಪ್ರಾಶಸ್ತ್ಯ ಸಿಕ್ಕಿದವರಿಗೆಇನ್ನೂಪೂರ್ಣಪ್ರಮಾಣದಲಸಿಕೆಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಒಟ್ಟಾರೆ ಶೇ 69ರಷ್ಟು ಮಂದಿಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಈ ಪೈಕಿ ಮುಕ್ಕಾಲು ಭಾಗ ಜನ ಎರಡೂ ಡೋಸ್‌ ಪಡೆದಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮೊದಲ ಡೋಸ್‌ ಪಡೆದವರ ಪ್ರಮಾಣ ಶೇ 60ಕ್ಕಿಂತ ಕಡಿಮೆ ಇದೆ.

ಜೈಡಸ್‌ ಕ್ಯಾಡಿಲಾ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ 3 ಡೋಸ್‌ಗಳಿರುವ ಜೈಕೋವ್‌-ಡಿಲಸಿಕೆಕುರಿತು ಮಾತನಾಡಿದ ಸಚಿವ ಭೂಷಣ್‌, ಶೀಘ್ರದಲ್ಲೇ ರಾಷ್ಟ್ರದಾದ್ಯಂತ ಈ ಲಸಿಕೆಯನ್ನು ಪರಿಚಯಿಸಲಾಗುವುದು ಎಂದರು.

ಲಸಿಕೆಕುರಿತು ಅಧ್ಯಯನಗಳ ಪುರಾವೆ
ಒಂದು ಸಂದರ್ಭದಲ್ಲಿ ಸಾರ್ಸ್‌ ಕೋವ್‌-2ನ ಡೆಲ್ಟಾ ರೂಪಾಂತರಿ ಸೋಂಕಿನಿಂದಕೋವಿಡ್‌-19ಲಸಿಕೆಸುರಕ್ಷತೆ ನೀಡುವ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು ಒದಗಿಸುವಂತೆ ಕೇಳಲಾಗಿತ್ತು. ಬೆನ್ನಲ್ಲೇ ಹಲವು ಅಧ್ಯಯನ ವರದಿಗಳುಕೋವಿಡ್‌ ಲಸಿಕೆಯ 2 ಡೋಸ್‌ಗಳನ್ನು ಪಡೆದುದ್ದರ ಪರಿಣಾಮ ಗಂಭೀರ ರೋಗಗಳಿಂದ ಬಚಾವದವರ ಬಗ್ಗೆ ತಿಳಿಸಿದ್ದವು. ಪ್ರಮುಖವಾಗಿಆರೋಗ್ಯಕಾರ್ಯಕರ್ತರನ್ನು ಉಲ್ಲೇಖಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT