ದೇಶದ ಜನರಿಗೆ ಉಸಿರಾಡುವುದು ಬೇಕಿದೆ, ಪ್ರಧಾನಿ ನಿವಾಸವಲ್ಲ: ರಾಹುಲ್ ಗಾಂಧಿ

ನವದೆಹಲಿ: ಕೋವಿಡ್–19 ಎರಡನೇ ಅಲೆಯ ಸಂದರ್ಭದಲ್ಲೇ ಕೇಂದ್ರ ಸರ್ಕಾರವು ಹೊಸ ಸಂಸತ್ ಭವನ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ದೇಶದ ಜನರಿಗೆ ಈಗ ಉಸಿರಾಡುವುದು ಬೇಕಾಗಿದೆಯೇ ಹೊರತು ಪ್ರಧಾನಿ ನಿವಾಸವಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಜನರು ಆಮ್ಲಜನಕ ಸಿಲಿಂಡರ್‌ಗಳನ್ನು ತುಂಬಿಸಿಕೊಳ್ಳಲು ಸರದಿಯಲ್ಲಿ ನಿಂತಿರುವ ಮತ್ತು ಸೆಂಟ್ರಲ್ ವಿಸ್ತಾ ಯೋಜನೆಯ ನಿರ್ಮಾಣ ಕಾಮಗಾರಿಯ ಚಿತ್ರವನ್ನೂ ಲಗತ್ತಿಸಿದ್ದಾರೆ.
ಓದಿ: ಸೆಂಟ್ರಲ್ ವಿಸ್ತಾ ಯೋಜನೆ ‘ಕ್ರಿಮಿನಲ್ ವೇಸ್ಟೇಜ್‘: ರಾಹುಲ್ ಗಾಂಧಿ ಟೀಕೆ
देश को PM आवास नहीं, सांस चाहिए! pic.twitter.com/jvTkm7diBm
— Rahul Gandhi (@RahulGandhi) May 9, 2021
‘ಸೆಂಟ್ರಲ್ ವಿಸ್ತಾ’ ಯೋಜನೆಯಡಿ ತ್ರಿಕೋನಾಕಾರದ ಹೊಸ ಸಂಸತ್ತಿನ ಭವನ ನಿರ್ಮಾಣ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿ.ಮೀ ಉದ್ದದ ರಾಜಪತ್ ನವೀಕರಣ ಮತ್ತು ಪ್ರಧಾನಿ ಮತ್ತು ಉಪ ರಾಷ್ಟ್ರಪತಿಯವರ ನೂತನ ನಿವಾಸಗಳ ನಿರ್ಮಾಣ ಮಾಡಲಾಗುತ್ತಿದೆ.
ಸೆಂಟ್ರಲ್ ವಿಸ್ತಾ ಯೋಜನೆಯನ್ನು ‘ಅಗತ್ಯ ವಸ್ತುಗಳ ಕಾಯ್ದೆ‘ಯಡಿ ತಂದು, ಲಾಕ್‌ಡೌನ್ ವೇಳೆ ಕಾಮಗಾರಿ ಕೈಗೊಳ್ಳಲಾಗಿದೆ.
ಓದಿ: ದೇಶದಲ್ಲಿ ಜನ ಸಾಯುತ್ತಿರುವಾಗ ಲಸಿಕೆ ರಫ್ತು ಮಾಡುವುದು ಅಪರಾಧ: ಮನೀಶ್ ಸಿಸೋಡಿಯಾ
ಸಾಂಕ್ರಾಮಿಕವು ಗ್ರಾಮೀಣ ಪ್ರದೇಶಗಳಲ್ಲಿಯೂ ಹರಡುತ್ತಿರುವ ಬಗ್ಗೆ ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದು, ‘ನಗರಗಳ ಬಳಿಕ ಇದೀಗ ಗ್ರಾಮೀಣ ಪ್ರದೇಶಗಳೂ ದೇವರ ಮೇಲೆ ಅವಲಂಬಿತವಾಗಿವೆ’ ಎಂದು ಹೇಳಿದ್ದಾರೆ.
शहरों के बाद, अब गाँव भी परमात्मा निर्भर! pic.twitter.com/KvJxN6fRIU
— Rahul Gandhi (@RahulGandhi) May 9, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.