ಗುರುವಾರ , ಆಗಸ್ಟ್ 11, 2022
22 °C

Covid-19 India Update | 47 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 37.2 ಲಕ್ಷ ಗುಣಮುಖ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 94,372 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 1,114 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆಯು 47,54,357 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಇದುವರೆಗೂ 37,02,596 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 9,73,175 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ. ಒಟ್ಟಾರೆ 78,586 ಜನರು ಸಾವಿಗೀಡಾಗಿದ್ದಾರೆ.

ಚೇತರಿಕೆ ಪ್ರಮಾಣ ಏರಿಕೆ

ಕೋವಿಡ್-19ನಿಂದ ಚೇತರಿಕೆಯ ಪ್ರಮಾಣವು ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ಗುಣಮುಖರಾದವರ ಸಂಖ್ಯೆ ಮೇನಲ್ಲಿ 50 ಸಾವಿರದಿಂದ ಸೆಪ್ಟೆಂಬರ್‌ ವೇಳೆಗೆ 36 ಲಕ್ಷಕ್ಕೆ ಏರಿಕೆಯಾಗಿದೆ. ಪ್ರತಿದಿನವೂ 70,000 ಕ್ಕೂ ಹೆಚ್ಚಿನ ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ ಸುಮಾರು 3.8 ಪಟ್ಟು (ಒಟ್ಟು 1/4 ಪ್ರಕರಣಗಳಲ್ಲಿ) ಚೇತರಿಕೆ ಕಂಡಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಪರೀಕ್ಷೆ ಪ್ರಮಾಣದಲ್ಲಿ ಹೆಚ್ಚಳ ಮತ್ತು ತ್ವರಿತವಾಗಿ ಪತ್ತೆಹಚ್ಚುವಿಕೆ ಮತ್ತು ಉನ್ನತ ಗುಣಮಟ್ಟದ ಕ್ಲಿನಿಕಲ್ ಆರೈಕೆಯಿಂದಾಗಿ ಕೋವಿಡ್-19ನಿಂದ ಚೇತರಿಕೆಯ ಪ್ರಮಾಣ ಹೆಚ್ಚಲು ಕಾರಣವಾಗಿದೆ. 

ಸೆಪ್ಟೆಂಬರ್ 12 ರವರೆಗೆ ಒಟ್ಟು 5,62,60,928 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 10,71,702 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಒಟ್ಟಾರೆ 10,37,765 ಜನರಿಗೆ ಸೋಂಕು ತಗುಲಿದ್ದರೆ, 7,28,512 ಗುಣಮುಖರಾಗಿದ್ದಾರೆ. ಈವರೆಗೂ 29,115 ಜನರು ಸಾವಿಗೀಡಾಗಿದ್ದಾರೆ. ಆಂಧ್ರಪ್ರದೇಶದಲ್ಲಿ 5,57,587 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 4,57,008 ಜನರು ಗುಣಮುಖರಾಗುವುದರೊಂದಿಗೆ 4,846 ಜನರು ಸಾವಿಗೀಡಾಗಿದ್ದಾರೆ.

ಇನ್ನುಳಿದಂತೆ ತಮಿಳು ನಾಡಿನಲ್ಲಿ 4,97,066, ಕರ್ನಾಟಕದಲ್ಲಿ 4,49,551, ದೆಹಲಿಯಲ್ಲಿ 2,14,069 ಮತ್ತು ಉತ್ತರ ಪ್ರದೇಶದಲ್ಲಿ 3,05,831 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು