ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: 1 ಕೋಟಿ ಮೈಲುಗಲ್ಲು ದಾಟಿದ ಕೋವಿಡ್ ವ್ಯಾಕ್ಸಿನೇಷನ್

Last Updated 19 ಫೆಬ್ರುವರಿ 2021, 7:20 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್-19 ಲಸಿಕೆ ವಿತರಣೆಯು ಒಂದು ಕೋಟಿಯ ಮಹತ್ತರ ಮೈಲುಗಲ್ಲನ್ನು ದಾಟಿದೆ.

ಈ ಕುರಿತು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಮಾಹಿತಿ ಒದಗಿಸಿದೆ. ದೇಶದಲ್ಲಿ ಇದುವರೆಗೆ 1,01,88,007 ವ್ಯಾಕ್ಸಿನೇಷನ್ಪೂರೈಸಲಾಗಿದೆ.

ಹೊಸ ವರ್ಷದಲ್ಲಿ ಜನವರಿ 16ರಂದು ಕೋವಿಡ್-19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಮುಂಚೂಣಿಯ ಸೇನಾನಿಗಳಿಗೆ ಲಸಿಕೆ ನೀಡಲಾಗಿದೆ.

ಹಾಗೆಯೇ ಕಳೆದ 24 ತಾಸಿನಲ್ಲಿ ಹೊಸತಾಗಿ 13,193 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇದರೊಂದಿಗೆ ಭಾರತದಲ್ಲಿ ಕೋವಿಡ್-19 ಒಟ್ಟು ಪ್ರಕರಣಗಳ ಸಂಖ್ಯೆ 1,09,63,394ಕ್ಕೆ ತಲುಪಿದೆ.

ಕಳೆದ 24 ತಾಸಿನಲ್ಲಿ 97 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 1,56,111ಕ್ಕೆ ತಲುಪಿದೆ.

ದೇಶದಲ್ಲೀಗ ಒಟ್ಟು 1,39,542 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 1,06,67,741 ಮಂದಿ ರೋಗಮುಕ್ತಿ ಹೊಂದಿದ್ದಾರೆ.

ಕೋವಿಡ್-19 ಅಂಕಿಅಂಶ:
ಒಟ್ಟು ಪ್ರಕರಣ: 1,09,63,394
ಗುಣಮುಖ: 1,06,67,741
ಮೃತರ ಸಂಖ್ಯೆ: 1,56,111
ಸಕ್ರಿಯ ಪ್ರಕರಣ: 1,39,542

ಒಟ್ಟು ವ್ಯಾಕ್ಸಿನೇಷನ್: 1,01,88,007

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT