ಶನಿವಾರ, ಜನವರಿ 23, 2021
18 °C

Covid-19 India Update: ದೇಶದಲ್ಲಿ 1.04 ಕೋಟಿ ತಲುಪಿದ ಕೊರೊನಾ ವೈರಸ್ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 104,13,417ಕ್ಕೆ ಏರಿಕೆಯಾಗಿದೆ. ಕಳೆದ 24 ತಾಸಿನಲ್ಲಿ ಹೊಸತಾಗಿ 18,139 ಕೋವಿಡ್-19 ಪ್ರಕರಣಗಳು ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಕಳೆದೊಂದು ದಿನದಲ್ಲಿ 20,539 ಮಂದಿ ಚೇತರಿಸಿಕೊಂಡಿದ್ದು, 234 ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಇದುವರೆಗೆ ಒಟ್ಟು 1,00,37,398 ಮಂದಿ ಗುಣಮುಖರಾಗಿದ್ದು, 1,50,570 ಮಂದಿ ಮೃತಪಟ್ಟಿದ್ದಾರೆ. 

ದೇಶದಲ್ಲಿ 2,25,449 ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಕೇರಳದಲ್ಲಿ 64,639 ಹಾಗೂ ಮಹಾರಾಷ್ಟ್ರದಲ್ಲಿ 52,276 ಸಕ್ರಿಯ ಪ್ರಕರಣಗಳಿವೆ. 

ಇದನ್ನೂ ಓದಿ: 

ಕೊರೊನಾ ವೈರಸ್ ಪಟ್ಟಿ ಇಂತಿದೆ: 
ಒಟ್ಟು ಪ್ರಕರಣ: 104,13,417
ಗುಣಮುಖ: 1,00,37,398
ಸಕ್ರಿಯ ಪ್ರಕರಣ: 2,25,449
ಮರಣ: 1,50,570

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು