ಮಂಗಳವಾರ, ಮಾರ್ಚ್ 2, 2021
23 °C

ವಿಶ್ವದಲ್ಲಿ ಸ್ವಾವಲಂಬಿ ನವ ಭಾರತದ ಉದಯ: ಅಮಿತ್ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆಯು ಜಗತ್ತಿನಲ್ಲಿ ಸ್ವಾವಲಂಬಿ ನವ ಭಾರತದ ಉದಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, ಕೋವಿಡ್-19 ಲಸಿಕೆ ಹಂಚಿಕೆಯು ಐತಿಹಾಸಿಕ ಕ್ಷಣ ಹಾಗೂ ಮಹತ್ವದ ಮೈಲುಗಲ್ಲು ಎಂದು ಉಲ್ಲೇಖಿಸಿದರು. 

'ದೇಶವು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಮುಖ ಹಂತವನ್ನು ದಾಟಿದೆ. ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಅಭಿಯಾನವು ವಿಜ್ಞಾನಿಗಳ ಅಪಾರ ಸಾಮರ್ಥ್ಯ ಮತ್ತು ನಾಯಕತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದರು.

 

 

 

'ಮಾನವಕುಲದ ವಿರುದ್ಧ ಎದುರಾಗಿರುವ ಬಿಕ್ಕಟ್ಟನ್ನು ಸಮಾಪ್ತಿಗೊಳಿಸುವಲ್ಲಿ ಯಶಸ್ವಿಯಾಗಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಈ ಅಭೂತಪೂರ್ವ ಸಾಧೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಿದೆ. ಇದು ಜಗತ್ತಿನಲ್ಲಿ ಸ್ವಾವಲಂಬಿ ನವ ಭಾರತದ ಉದಯವಾಗಿದೆ. ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು' ಎಂದು ತಿಳಿಸಿದರು.

ಇದನ್ನೂ ಓದಿ: 

 

'ನರೇಂದ್ರ ಮೋದಿ ನೇತೃತ್ವದ ಈ ನವ ಭಾರತವು ವಿಪತ್ತುಗಳನ್ನು ಅವಕಾಶಗಳಾಗಿ ಮತ್ತು ಸವಾಲುಗಳನ್ನು ಸಾಧನೆಗಳಾಗಿ ಪರಿವರ್ತಿಸುವ ಭಾರತವಾಗಿದೆ. ಈ 'ಮೇಡ್ ಇನ್ ಇಂಡಿಯಾ' ಲಸಿಕೆಯು ಸ್ವಾವಲಂಬಿ ಭಾರತದ ಪ್ರತೀಕವಾಗಿದೆ. ಈ ಐತಿಹಾಸಿಕ ದಿನದಂದು ನಮ್ಮ ಎಲ್ಲ ಕೊರೊನಾ ಸೇನಾನಿಗಳಿಗೆ ಕೋಟಿ ಕೋಟಿ ನಮನಗಳು' ಎಂದು ಉಲ್ಲೇಖಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು