ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ನ ಭಾರತೀಯ ತಳಿ ಅಧಿಕ ರೋಗಕಾರಕ: ವಿಜ್ಞಾನಿಗಳ ಪ್ರತಿಪಾದನೆ

Last Updated 9 ಮೇ 2021, 15:14 IST
ಅಕ್ಷರ ಗಾತ್ರ

ನವದೆಹಲಿ: ರೂಪಾಂತರಗೊಂಡಿರುವ ಸಾರ್ಸ್‌–ಕೋವ್‌–2 ವೈರಸ್‌ನ ಭಾರತೀಯ ತಳಿ (ಬಿ.1.617) ಅಧಿಕ ರೋಗಕಾರಕವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ನಡೆಸಿರುವ ಹೊಸ ಅಧ್ಯಯನದಿಂದ ತಿಳಿದು ಬಂದಿದೆ.

ದೇಶದಲ್ಲಿ ಈಗಿನ ಸಂಕಷ್ಟ ಪರಿಸ್ಥಿತಿಗೆ ಕಾರಣವಾಗಿರುವ ಕಾರಣದಿಂದಲೇ ಈ ರೂಪಾಂತರ ವೈರಸ್‌ಅನ್ನು ಕೆಂದ್ರ ಆರೋಗ್ಯ ಸಚಿವಾಲಯ ‘ಕಳವಳಕಾರಿ ತಳಿ’ ಎಂದು ಕರೆದಿದೆ.

ಈ ವೈರಸ್‌ (ಬಿ.1.617) ಸೋಂಕು ಇಲಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಐಸಿಎಂಆರ್‌ ಅಧ್ಯಯನ ನಡೆಸಿದೆ. ಅಧಿಕ ಸೋಂಕು, ತೂಕದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಈ ಮೊದಲಿನ ತಳಿಗೆ ಹೋಲಿಸಿದರೆ, ಬಿ.1.617 ನಿಂದಾದ ಸೋಂಕಿನಿಂದ ಅವುಗಳ ಶ್ವಾಸಕೋಶಗಳು ಹೆಚ್ಚು ಹಾನಿಗೊಳಗಾಗಿದ್ದು ಕಂಡುಬಂದಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ದೇಶದ 17 ರಾಜ್ಯಗಳಲ್ಲಿ ಕೋವಿಡ್‌–19 ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವುದು ರೂಪಾಂತರಗೊಂಡಿರುವ ಈ ವೈರಸ್‌ ಎಷ್ಟು ರೋಗಕಾರಕ ಎಂಬುದನ್ನು ಸಾರುತ್ತದೆ. ಅದರಲ್ಲೂ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ದೆಹಲಿ ಹಾಗೂ ಗುಜರಾತ್‌ನಲ್ಲಿ ಈ ತಳಿಯ ವೈರಸ್‌ನ ಸೋಂಕು ಅಧಿಕ’ ಎಂದು ಐಸಿಎಂಆರ್‌ ಹೇಳಿದೆ.

ತಲಾ 9 ಇಲಿಗಳನ್ನು ಒಳಗೊಂಡ ಎರಡು ಗುಂಪುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಒಂದು ಗುಂಪಿನ ಇಲಿಗಳ ದೇಹದೊಳಗೆ ಬಿ1 (ಡಿಎ14ಜಿ) ವೈರಸ್‌, ಮತ್ತೊಂದು ಗುಂಪಿಗೆ ಬಿ 1.617 ವೈರಸ್‌ಅನ್ನು ಸೇರಿಸಲಾಯಿತು. ಕೆಲ ದಿನಗಳ ನಂತರ, ಬಿ 1.617 ವೈರಸ್‌ನ ಸೋಂಕಿಗೆ ಒಳಗಾಗಿದ್ದ ಇಲಿಗಳಲ್ಲಿಯೇ ಹೆಚ್ಚು ತೂಕ ನಷ್ಟ, ರಕ್ತಸ್ರಾವ ಹಾಗೂ ಶ್ವಾಸಕೋಶಗಳಲ್ಲಿ ಅಧಿಕ ಪ್ರಮಾಣದ ಹಾನಿ ಕಂಡುಬಂತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT