ನವದೆಹಲಿ: ದೇಶದಲ್ಲಿ ಸತತ ಮೂರನೇ ದಿನ 18,000 ಕ್ಕಿಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ದೇಶದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 1,12,29,398 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸತತ ಆರನೇ ದಿನವೂಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳು 1,88,747 ಕ್ಕೆ ಏರಿದ್ದು, ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪಾಲು ಶೇ 1.68 ರಷ್ಟಿದೆ.

ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 18,599 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 97 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,57,853 ಕ್ಕೆ ಏರಿದೆ. ಜನವರಿ 29 ರಂದು, 24 ಗಂಟೆಗಳ ಅವಧಿಯಲ್ಲಿ 18,855 ಹೊಸ ಸೋಂಕುಗಳು ದಾಖಲಾಗಿದ್ದು ವರದಿಯಾಗಿತ್ತು.

ಈ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,08,82,798 ಕ್ಕೆ ಏರಿದೆ. ಆದರೆ ಸಾವಿನ ಪ್ರಮಾಣ ಶೇ 1.41 ರಷ್ಟಿದೆ.

ಭಾರತೀಯ ವೈದ್ಯಕೀಯ ಮಂಡಳಿ ಪ್ರಕಾರ ದೇಶದಲ್ಲಿ ಮಾ.7ರವರೆಗೆ 22,19,68,271 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಕೊರೊನಾ ಪೀಡಿತರ ಅಂಕಿಅಂಶ

ಸೋಂಕಿತರು ದಿನಾಂಕ

20 ಲಕ್ಷ 2020ರ ಆಗಸ್ಟ್ 7

30 ಲಕ್ಷ 2020ರ ಆಗಸ್ಟ್ 23

40 ಲಕ್ಷ 2020ರ ಸೆಪ್ಟೆಂಬರ್ 5

50 ಲಕ್ಷ 2020ರ ಸೆಪ್ಟೆಂಬರ್ 16

60 ಲಕ್ಷ 2020ರ ಸೆಪ್ಟೆಂಬರ್ 28

70 ಲಕ್ಷ 2020ರ ಅಕ್ಟೋಬರ್ 11

80 ಲಕ್ಷ 2020ರ ಅಕ್ಟೋಬರ್ 29

90 ಲಕ್ಷ 2020ರ ನವೆಂಬರ್ 20

1 ಕೋಟಿ 2020ರ ಡಿಸೆಂಬರ್ 19

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.