ಸೋಮವಾರ, ಆಗಸ್ಟ್ 8, 2022
22 °C

ಕೋವಿಡ್ ಸೋಂಕಿತರಿಗೆ ನರರೋಗ ಸಾಧ್ಯತೆ ಅಧಿಕ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಕೋವಿಡ್‌ ನೆಗೆಟಿವ್‌ ಇರುವವರಿಗೆ ಹೋಲಿಕೆ ಮಾಡಿದಲ್ಲಿ ಸೋಂಕು ದೃಢಪಟ್ಟಿರುವವರು ನರಗಳಿಗೆ ಸಂಬಂಧಿಸಿದ ರೋಗಗಳಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು ಎಂದು ಡೆನ್ಮಾರ್ಕ್‌ನ ಹೊಸ ಅಧ್ಯಯನ ವರದಿಯು ತಿಳಿಸಿದೆ.

ಸೋಂಕು ದೃಢಪಟ್ಟಿರುವರು ನರ ದೌರ್ಬಲ್ಯಕ್ಕೆ ಸಂಬಂಧಿಸಿದ ಅಲ್‌ಝೈಮರ್‌, ಪಾರ್ಕಿನ್‌ಸನ್‌ ರೋಗಗಳಿಗೆ ಬಾಧಿತರಾಗುವ ಅಪಾಯಗಳು ಹೆಚ್ಚಿರಲಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 

ವಿಯೆನ್ನಾದಲ್ಲಿ ನಡೆದ ನರವಿಜ್ಞಾನ ಕುರಿತ 8ನೇ ಯೂರೋಪಿಯನ್ ಅಕಾಡೆಮಿ ಸಮಾವೇಶದಲ್ಲಿ ಈ ವರದಿ ಮಂಡಿಸಲಾಗಿದೆ. ಡ್ಯಾನಿಶ್‌ನ ಶೇ 50ರಷ್ಟು ಜನಸಂಖ್ಯೆಯ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಅಂಕಿ ಅಂಶವನ್ನು ಈ ವರದಿ ಆಧರಿಸಿದೆ.

ಡೆನ್ಮಾರ್ಕ್‌ನಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟ 9,19,731 ಜನರ ಪೈಕಿ 43,375 ಜನರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಇವರಿಗೆ ಇತರರಿಗೆ ಹೋಲಿಸಿದಲ್ಲಿ ಅಲ್‌ಝೈಮರ್‌ಗೆ ತುತ್ತಾಗುವ ಸಾಧ್ಯತೆಗಳು ಶೇ 3.5ರಷ್ಟು ಹೆಚ್ಚಾಗಿತ್ತು ಎಂದೂ ತಿಳಿಸಿವೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು