ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪ್ರಕ್ರಿಯೆಗೆ ವೇಗ, ಜುಲೈನಲ್ಲಿ 13.45 ಕೋಟಿ ಡೋಸ್‌ ವಿತರಣೆ: ಮಾಂಡವೀಯ

Last Updated 7 ಆಗಸ್ಟ್ 2021, 9:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಪ್ರತಿ ತಿಂಗಳು ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆಯು ವೇಗ ಪಡೆಯುತ್ತಿದೆ. ಜುಲೈನಲ್ಲಿ ಒಟ್ಟು 13.45 ಕೋಟಿ ಡೋಸ್‌ಗಳನ್ನು ನೀಡಲಾಗಿದ್ದು, ದೈನಂದಿನ ಸರಾಸರಿ ಲಸಿಕೆ ವಿತರಣೆ 43.41 ಲಕ್ಷ ಡೋಸ್‌ಗಳಷ್ಟಿರುವುದು ಗಮನಾರ್ಹವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.

‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತವು ಪ್ರಬಲವಾಗುತ್ತಿದೆ. #SabkoVaccineMuftಗೆ ಒಂದು ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ, ಪ್ರತಿ ತಿಂಗಳು ಲಸಿಕೆ ವಿತರಣೆ ಪ್ರಕ್ರಿಯೆ ವೇಗವಾಗಿ ಹೆಚ್ಚುತ್ತಿದೆ. ಜುಲೈ ತಿಂಗಳಲ್ಲಿ ಗಮನಾರ್ಹವಾಗಿ ದೈನಂದಿನ ಸರಾಸರಿ 43.41 ಲಕ್ಷ ಡೋಸ್ ಮತ್ತು ತಿಂಗಳಲ್ಲಿ ಒಟ್ಟು 13.45 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ’ ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಈವರೆಗೆ, ಒಟ್ಟು 50,10,09,609 ಲಸಿಕೆ ಡೋಸ್‌ಗಳನ್ನು 58,08,344 ಸೆಷನ್‌ಗಳ ಮೂಲಕ ನಿರ್ವಹಿಸಲಾಗಿದೆ ಎಂದು ಶನಿವಾರ ಬೆಳಿಗ್ಗೆ 7 ಗಂಟೆಯವರೆಗಿನ ತಾತ್ಕಾಲಿಕ ವರದಿ ತಿಳಿಸಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 49,55,138 ಡೋಸ್ ಲಸಿಕೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲು ಮತ್ತು ದೇಶದಾದ್ಯಂತ ಕೋವಿಡ್ -19 ಲಸಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT