ಭಾನುವಾರ, ಸೆಪ್ಟೆಂಬರ್ 27, 2020
27 °C

ರಾಜಸ್ಥಾನ | ರಾಜಕೀಯ ವಿಕೃತತೆಯ ಸೋಲು: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ‘ಆಪರೇಷನ್ ಕಮಲ’ಕ್ಕೆ ಸೋಲುಂಟಾಗಿದ್ದು, ಇದು ‘ರಾಜಕೀಯ ವಿಕೃತತೆ’ಯ ಸೋಲು ಎಂದು ಮಹಾರಾಷ್ಟ್ರದ ಶಿವಸೇನಾ ಪಕ್ಷ ಹೇಳಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಶಿವಸೇನಾ, ‘‘ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರು ‘ಆಪರೇಷನ್‌ ಕಮಲ’ ಮಾಡುವ ಬಿಜೆಪಿಯವರಿಗೆ ‘ಆಪರೇಷನ್‌’ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ’ ಎಂದು ಉಲ್ಲೇಖಿಸಿದೆ.

‘ಗೆಹ್ಲೋಟ್‌ ಮುಂದೆ ಸಚಿನ್ ಪೈಲಟ್‌ ದುರ್ಬಲ ಆಟಗಾರ’ ಎಂದು ಬಣ್ಣಿಸಿರುವ ಶಿವಸೇನಾ, ‌‘ಈ ಎಲ್ಲ ಬೆಳವಣಿಗೆಗಳಿಂದ ಇನ್ನು ಮುಂದಾದರೂ ಬಿಜೆಪಿ ಪಾಠ ಕಲಿಯಬೇಕಿದೆ’ ಎಂದು ಅದು ಕಿವಿಮಾತು ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು