ಶನಿವಾರ, ಸೆಪ್ಟೆಂಬರ್ 26, 2020
22 °C
ರಕ್ಷಣಾ ಸಚಿವಾಲಯದ ಜಾಲತಾಣ: ಪ್ರಕಟವಾದ ಎರಡೇ ದಿನದಲ್ಲಿ ಕಣ್ಮರೆ

ರಕ್ಷಣಾ ಸಚಿವಾಲಯದ ಜಾಲತಾಣ: ಚೀನಾ ಅತಿಕ್ರಮಣ ಉಲ್ಲೇಖವಿದ್ದ ದಾಖಲೆ ‘ಡಿಲೀಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ

ನವದೆಹಲಿ: ಲಡಾಖ್‌ನಲ್ಲಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ), ಅದರಲ್ಲೂ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನೆಯು ಭಾರತದ ನೆಲವನ್ನು ಅತಿಕ್ರಮಿಸಿದೆ ಎಂಬ ಉಲ್ಲೇಖವಿದ್ದ ದಾಖಲೆ ಪತ್ರವು, ರಕ್ಷಣಾ ಸಚಿವಾಲಯದ ಜಾಲತಾಣದಲ್ಲಿ ಪ್ರಕಟವಾದ ಎರಡೇ ದಿನದಲ್ಲಿ ಕಣ್ಮರೆಯಾಗಿದೆ.

ಭಾರತದ ನೆಲವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾದ ಮಾಹಿತಿಯನ್ನು ಈ ದಾಖಲೆ ಹೊಂದಿತ್ತು. ಈ ದಾಖಲೆಯನ್ನು ಜಾಲತಾಣದಿಂದ ತೆಗೆದು ಹಾಕಿದ್ದರ ಬಗ್ಗೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.‘2020ರ ಜೂನ್‌ ತಿಂಗಳಲ್ಲಿ ರಕ್ಷಣಾ ಸಚಿವಾಲಯದ ಪ್ರಮುಖ ಕಾರ್ಯಚಟುವಟಿಕೆಗಳು’ ಎಂಬ ಹೆಸರಿನ ವರದಿಯನ್ನು ರಕ್ಷಣಾ ಸಚಿವಾಲಯದ ಜಾಲತಾಣದಲ್ಲಿ ಇದೇ ಮಂಗಳವಾರ ಪ್ರಕಟಿಸಲಾಗಿತ್ತು. ‘ಎಲ್‌ಎಸಿಯಲ್ಲಿ, ಅದರಲ್ಲೂ ಗಾಲ್ವನ್ ಕಣಿವೆಯಲ್ಲಿ ಮೇ 5ರ ನಂತರ ಚೀನಾ ಸೇನೆಯ ಅತಿಕ್ರಮಣ ಹೆಚ್ಚಳವಾಗಿದೆ. ಕುಂಗ್ರಾಂಗ್ ನಾಲಾ, ಗೋಗ್ರಾ ಮತ್ತು ಪ್ಯಾಂಗಾಂಗ್ ಸರೋವರದ ಉತ್ತರದ ದಂಡೆಯಲ್ಲಿ ಮೇ 17–18ರಂದು ಚೀನಾ ಸೈನಿಕರು ಅತಿಕ್ರಮಣ ಮಾಡಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿತ್ತು.

* ಚೀನಾದ ಹೆಸರು ಹೇಳುವ ಧೈರ್ಯವನ್ನೂ ಪ್ರಧಾನಿ ತೋರಿಸುತ್ತಿಲ್ಲ. ಚೀನಾ ನಮ್ಮ ನೆಲದಲ್ಲಿದೆ ಎಂಬುದರ ನಿರಾಕರಣೆ, ದಾಖಲೆ ಅಳಿಸಿದ ಮಾತ್ರಕ್ಕೆ ಸತ್ಯ ಬದಲಾ ಗುವುದಿಲ್ಲ

–ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು