ಶನಿವಾರ, ಜೂನ್ 25, 2022
24 °C

ದೇಶೀ ನಿರ್ಮಿತ ಎರಡು ಹೊಸ ಯುದ್ಧ ನೌಕೆಗಳಿಗೆ ರಾಜನಾಥ್‌ ಸಿಂಗ್‌ ಚಾಲನೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ದೇಶೀ ನಿರ್ಮಿತ ಎರಡು ಹೊಸ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಮಂಗಳವಾರ ಸೇರ್ಪಡೆಗೊಂಡಿವೆ.

‘ಡೆಸ್ಟ್ರಾಯರ್‌’ (ಕ್ಷಿಪಣಿ ವಿಧ್ವಂಸಕ) ‘ಐಎಎನ್‌ಎಸ್‌ ಸೂರತ್‌’ ಮತ್ತು ‘ಫ್ರಿಗೆಟ್‌’ (ಹಲವು ಶಸ್ತ್ರಾಸ್ತ್ರಗಳನ್ನು ಒಳಗೊಂಡ, ಡೆಸ್ಟ್ರಾಯರ್‌ಗಿಂತಲೂ ಪ್ರಬಲವಾದ) ‘ಐಎಎನ್‌ಎಸ್‌ ಉದಯಗಿರಿ’ ಎಂಬ ಹೆಸರಿನ ನೌಕೆಗಳಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚಾಲನೆ ನೀಡಿದರು.

‘ದೇಶಿ ನಿರ್ಮಿತ ಯುದ್ಧನೌಕೆಗಳು ಭಾರತದ ವ್ಯೂಹಾತ್ಮಕ ಶಕ್ತಿ ಮತ್ತು ಸ್ವಾವಲಂಬನೆಯನ್ನು ಜಗತ್ತಿಗೆ ಪ್ರದರ್ಶಿಸುತ್ತಿವೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು