ನವದೆಹಲಿ: ‘ಕೋವಿಡ್ ಪಿಡುಗಿನ ಹಿನ್ನೆಲೆಯಲ್ಲಿ ಸುಮಾರು 18 ತಿಂಗಳಿನಿಂದ ಸ್ಥಗಿತಗೊಂಡಿದ್ದ ದೆಹಲಿ ವಿಮಾನ ನಿಲ್ದಾಣದ ಟಿರ್ಮಿನಲ್ 1(ಟಿ1) ಅಕ್ಟೋಬರ್ 31ರಿಂದ ಪುನರಾರಂಭಗೊಳ್ಳಲಿದೆ. ಈ ಮೂಲಕ ಎಲ್ಲಾ ಮೂರು ಟರ್ಮಿನಲ್‌ಗಳೂ ಕಾರ್ಯಾರಂಭ ಮಾಡಿದಂತಾಗುತ್ತದೆ ಎಂದುದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಡಿಐಎಎಲ್) ಶುಕ್ರವಾರ ತಿಳಿಸಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ 3 ಮತ್ತು ಟರ್ಮಿನಲ್ 2 ಕ್ರಮವಾಗಿ ಕಳೆದ ವರ್ಷ ಮೇ 25 ರಿಂದ ಹಾಗೂ ಈ ವರ್ಷದ ಜುಲೈ 22ರಿಂದ ಕಾರ್ಯಾರಂಭ ಮಾಡಿದ್ದವು. 1ನೇ ಟರ್ಮಿನಲ್ 18 ತಿಂಗಳಿಂದೀಚೆಗೆ ಬಂದ್ ಆಗಿತ್ತು ಎಂದು ಜಿಎಂಆರ್ ಸಮೂಹ ನಿರ್ವಹಣೆಯ ಡಿಐಎಎಲ್ ಸಿಇಒ ವಿದೇಶ್ ಕುಮಾರ್ ಜೈಪುರಿಯರ್ ತಿಳಿಸಿದ್ದಾರೆ.
2020ರ ಮಾರ್ಚ್ 25ರಿಂದೀಚೆಗೆ 1ನೇ ಟರ್ಮಿನಲ್‌ನಿಂದ ಒಂದೇ ಒಂದು ವಿಮಾನ ಹಾರಾಟವನ್ನೂ ನಡೆಸಿರಲಿಲ್ಲ.
ವಿಮಾನಯಾನ ಉದ್ಯಮದ ಮೂಲಗಳ ಪ್ರಕಾರ, ದೇಶದಲ್ಲಿ ಇಂದು ಕೋವಿಡ್ ಪೂರ್ವ ಅವಧಿಯ ಶೇ 70ರಷ್ಟು ದೇಶೀಯ ಮತ್ತು ಶೇ 20ರಷ್ಟು ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳು ನಡೆಯುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.