ನವದೆಹಲಿ: ಮದ್ಯ ಸೇವನೆಯ ಕನಿಷ್ಠ ಪ್ರಾಯ ಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಹೊಸ ಅಬಕಾರಿ ನೀತಿಗೆ ದೆಹಲಿ ಕ್ಯಾಬಿನೆಟ್ ಸೋಮವಾರ ಅನುಮೋದನೆ ನೀಡಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕಟಿಸಿದ್ದಾರೆ.
ಹೊಸ ಅಬಕಾರಿ ನೀತಿಯ ಪ್ರಕಾರ ದೆಹಲಿಯಲ್ಲಿ ಹೊಸ ಮದ್ಯದಂಗಡಿ ತೆರೆಯುವಂತಿಲ್ಲ.
ಸಚಿವರ ಮಂಡಳಿಯ ಶಿಫಾರಸುಗಳನ್ನು ಪರಿಗಣಿಸಿ ಹೊಸ ಅಬಕಾರಿ ನೀತಿಗೆ ಸಂಪುಟದ ಅನುಮೋದನೆ ದೊರೆತಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯದಿರಲು ಹಾಗೂ ಸರ್ಕಾರವೂ ಯಾವುದೇ ಮದ್ಯದಂಗಡಿಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ಪ್ರಸ್ತುತ ದೆಹಲಿಯಲ್ಲಿ ಶೇಕಡಾ 60ರಷ್ಟು ಮದ್ಯದಂಗಡಿಗಳನ್ನು ಸರ್ಕಾರವೇ ಚಲಾಯಿಸುತ್ತಿದೆ.
ಮದ್ಯದಂಗಡಿಗಳ ಸಮಾನವಾದ ವಿತರಣೆಯನ್ನು ಸರ್ಕಾರ ಖಚಿತಪಡಿಸುತ್ತದೆ. ಈ ಮೂಲಕ ಮದ್ಯ ಮಾಫಿಯಾ ವ್ಯಾಪಾರವನ್ನು ತಡೆಯಬಹುದಾಗಿದೆ. ಅಬಕಾರಿ ನೀತಿಯ ಬದಲಾಯಣೆಗಳಿಂದ ಶೇಕಡಾ 20ರಷ್ಟು ಆದಾಯ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.