ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿರೋಜಾಬಾದ್: ಡೆಂಗಿನಿಂದ ಮತ್ತೆ ಇಬ್ಬರು ಸಾವು; ಮೃತರ ಸಂಖ್ಯೆ 60ಕ್ಕೆ ಏರಿಕೆ

Last Updated 14 ಸೆಪ್ಟೆಂಬರ್ 2021, 8:48 IST
ಅಕ್ಷರ ಗಾತ್ರ

ಫಿರೋಜಾಬಾದ್: ‘ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯಲ್ಲಿ ಡೆಂಗಿಯಿಂದಾಗಿ ಮತ್ತೆ ಇಬ್ಬರು ಸಾವಿಗೀಡಾಗಿದ್ದು, ಇದರೊಂದಿಗೆ ವೈರಲ್‌ ಜ್ವರದಿಂದ ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಡೆಂಗಿ ಜ್ವರದಿಂದಾಗಿ 14 ವರ್ಷದ ಬಾಲಕಿ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾಳೆ. ಮತ್ತೊಂದು ಮಗು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದೆ’ ಎಂದು ಅಗಾರ ವಿಭಾಗದ ಹೆಚ್ಚುವರಿ ನಿರ್ದೇಶಕ(ಆರೋಗ್ಯ) ಎ.ಕೆ ಸಿಂಗ್‌ ಅವರು ಮಾಹಿತಿ ನೀಡಿದರು.

‘ಮೃತ ಬಾಲಕಿಯ ಸಹೋದರಿ ಹೆಚ್ಚುವರಿ ಆಯುಕ್ತ ಅಮಿತ್‌ ಗುಪ್ತಾ ಅವರ ವಾಹನ ತಡೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲಾಯಿತು’ ಎಂದು ಅಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಡೆಂಗಿ ಚಿಕಿತ್ಸೆಗೆ ಅಧಿಕ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಂದ್ರ ವಿಜಯ್‌ ಸಿಂಗ್‌ ಅವರು ಶುಲ್ಕಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.

‘ಕಳೆದ ಮೂರು ವಾರಗಳಿಂದ ಫಿರೋಜಾಬಾದ್‌ ಜಿಲ್ಲೆಯು ಡೆಂಗಿ ವಿರುದ್ಧ ಹೋರಾಡುತ್ತಿದ್ದು, ಮಕ್ಕಳೇ ಹೆಚ್ಚಾಗಿ ಇದಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಮಥುರಾ, ಆಗ್ರಾ ಮತ್ತು ಮೈನ್‌ಪುರಿಯಲ್ಲೂ ವೈರಲ್‌ ಜ್ವರದ ಪ್ರಕರಣಗಳು ವರದಿಯಾಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT