ಭಾನುವಾರ, ಜೂನ್ 20, 2021
23 °C

ಕರಿಪ್ಪುರ: ಬೃಹತ್‌ ವಿಮಾನಗಳ ಹಾರಾಟಕ್ಕೆ ನಿರ್ಬಂಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋಯಿಕ್ಕೋಡ್‌ ಕರಿಪ್ಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಮುಂಗಾರಿನ ಅವಧಿಯಲ್ಲಿ ಬೃಹತ್‌ ವಿಮಾನಗಳ ಕಾರ್ಯಾಚರಣೆಯನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು (ಡಿಜಿಸಿಎ) ನಿರ್ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಕರಿಪ್ಪುರ ವಿಮಾನ ನಿಲ್ದಾಣದಲ್ಲಿ 190 ಪ್ರಯಾಣಿಕರಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಬಿ737 ವಿಮಾನವೊಂದು ರನ್‌ವೇಯಿಂದ ಜಾರಿ  ಅಪಘಾತಕ್ಕೀಡಾದ ನಾಲ್ಕು ದಿನದ ನಂತರ ಡಿಜಿಸಿಎ ಈ ನಿರ್ಧಾರ ಕೈಗೊಂಡಿದೆ. ಘಟನೆಯಲ್ಲಿ 18 ಜನರು ಮೃತಪಟ್ಟಿದ್ದರು. ‘ಎಲ್ಲಿಯವರೆಗೆ ನಿರ್ಬಂಧ ಎಂಬ ದಿನಾಂಕವನ್ನು ನಿಗದಿಪಡಿಸಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಈ ಮುಂಗಾರಿನ ಅವಧಿಯಲ್ಲಿ ಈ ನಿರ್ಬಂಧ ಇರಲಿದೆ’ ಎಂದು ಅಧಿಕಾರಿ ತಿಳಿಸಿದರು. ‘ಜೊತೆಗೆ ಹೆಚ್ಚಿನ ಮಳೆಯಾಗುವಂಥ ಪ್ರದೇಶದಲ್ಲಿ ಇರುವ ವಿಮಾನ ನಿಲ್ದಾಣಗಳ ಸುರಕ್ಷತೆ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು’ ಎಂದರು. 

ಬೋಯಿಂಗ್‌ 737 ಅಥವಾ ಏರ್‌ಬಸ್‌ 320ಗೆ ಹೋಲಿಸಿದರೆ ಬೋಯಿಂಗ್‌ 747 ಹಾಗೂ ಏರ್‌ಬಸ್‌ 350 ವಿಮಾನಗಳು ಬೃಹತ್‌ ಇಂಧನ ಟ್ಯಾಂಕ್‌ಗಳನ್ನು ಹೊಂದಿದ್ದು, ಇವುಗಳು ಟೇಕ್‌ಆಫ್‌ ಆಗಲು ಅಥವಾ ಇಳಿಯಲು ಹೆಚ್ಚಿನ ಉದ್ದದ ರನ್‌ವೇಗಳು ಬೇಕಾಗುತ್ತವೆ. ಕರಿಪ್ಪುರ ವಿಮಾನ ನಿಲ್ದಾಣದ ರನ್‌ವೇ 2,700 ಮೀ. ಉದ್ದವಿದ್ದು, 2019ರಿಂದ ಇಲ್ಲಿ ಬೃಹತ್‌ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು