ಸೋಮವಾರ, ಏಪ್ರಿಲ್ 19, 2021
32 °C

ಎಸ್‌ಎಫ್‌ಡಿಆರ್‌ ತಂತ್ರಜ್ಞಾನದ ಕ್ಷಿಪಣಿಗಳ ಹಾರಾಟ ಯಶಸ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಲಾಸೋರ್‌, ಒಡಿಶಾ: ಎಸ್‌ಎಫ್‌ಡಿಆರ್ (ಸಾಲಿಡ್‌ ಫ್ಯುಯಲ್‌ ಡಕ್ಟೆಡ್ ರಾಮ್‌ಜೆಟ್‌) ತಂತ್ರಜ್ಞಾನ ಆಧರಿತ ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಶುಕ್ರವಾರ ಒಡಿಶಾದಲ್ಲಿ ಯಶಸ್ವಿಯಾಗಿ ನಡೆಸಿತು.

ಚಾಂದಿಪುರ್‌ ಉಡಾವಣಾ ಕೇಂದ್ರದಲ್ಲಿ ಬೆಳಿಗ್ಗೆ 10.30 ಸುಮಾರಿಗೆ ‌ಈ ಪ್ರಯೋಗ ನಡೆಯಿತು. ಈ ಯಶಸ್ಸಿ ಪ್ರಯೋಗದ ಹಿನ್ನೆಲೆಯಲ್ಲಿ  ಡಿಆರ್‌ಡಿಒ ಈಗ ದೂರಗಾಮಿ ಗುರಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. 

ವಿಮಾನದ ಹಾರಾಟದ ವೇಳೆ ಗ್ರೌಂಡ್‌ ಬೂಸ್ಟರ್‌ ಮೋಟಾರ್‌ ಒಳಗೊಂಡಂತೆ ಎಲ್ಲ ಯಾಂತ್ರಿಕ ವ್ಯವಸ್ಥೆಯು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು ಎಂದು ಮೂಲಗಳು ತಿಳಿಸಿವೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು