ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕೊಂಡೊಯ್ಯಲು ಡ್ರೋನ್‌ ಬಳಕೆ!

ಐಸಿಎಂಆರ್‌ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಷರತ್ತಿನ ಅನುಮತಿ
Last Updated 22 ಏಪ್ರಿಲ್ 2021, 21:13 IST
ಅಕ್ಷರ ಗಾತ್ರ

ನವದೆಹಲಿ: ದುರ್ಗಮ ಸ್ಥಳಗಳಿಗೆ ಕೋವಿಡ್‌–19 ಲಸಿಕೆಗಳನ್ನು ಕೊಂಡೊಯ್ಯಲು ಡ್ರೋನ್‌ಗಳನ್ನು ಬಳಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಡ್ರೋನ್‌ಗಳನ್ನು ಬಳಸಿ ಕೋವಿಡ್‌–19 ಲಸಿಕೆ ಕೊಂಡೊಯ್ಯುವ ಕಾರ್ಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್‌) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಗುರುವಾರ ಷರತ್ತಿನ ವಿನಾಯಿತಿ ನೀಡಿದೆ.

ಕಾನ್ಪುರದ ಭಾರತೀಯ ತಂಜ್ಞಾನ ಸಂಸ್ಥೆ (ಐಐಟಿ) ಜತೆಯಲ್ಲಿ ಐಸಿಎಂಆರ್‌ ಲಸಿಕೆ ಕೊಂಡೊಯ್ಯುವ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲಿದೆ. ಲಸಿಕೆ ವಿತರಿಸುವ ಡ್ರೋನ್‌ಗಳನ್ನು ಬೆಂಗಳೂರಿನ ನವೋದ್ಯಮ ಸಿಡಿಸ್ಪೇಸ್‌ ರೊಬಾಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಅಭಿವೃದ್ಧಿಪಡಿಸಲಿದೆ.

ನಾಲ್ಕು ಕಿಲೋ ಗ್ರಾಂ ತೂಕವನ್ನು ಕೊಂಡೊಯ್ಯೊವ ಡ್ರೋನ್‌ಗಳನ್ನು ಸಿಡಿಸ್ಪೇಸ್‌ ರೊಬೊಟಿಕ್ಸ್‌ ಪ್ರದರ್ಶಿಸಿದೆ ಎಂದು ಐಐಟಿ ಕಾನ್ಪುರ್‌ ತಿಳಿಸಿದೆ.

ಈಗ ನೀಡಿರುವ ಅನುಮತಿಯು ಒಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಈ ಹಿಂದೆಯೂ ಉತ್ತರಾಖಂಡದಲ್ಲಿ ಡ್ರೋನ್‌ಗಳನ್ನು ಬಳಸಿ ರಕ್ತದ ಮಾದರಿಗಳನ್ನು ಸುಮಾರು 36 ಕಿಲೋ ಮೀಟರ್‌ವರೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಸಿಡಿಸ್ಪೇಸ್‌ ರೊಬೊಟಿಕ್ಸ್‌ ಪ್ರದರ್ಶಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT