ಶನಿವಾರ, ಮೇ 15, 2021
25 °C
ಪೂರ್ವ ಲಡಾಖ್‌ ಬೆಳವಣಿಗೆಗಳ ಕುರಿತ ರಷ್ಯಾ ಅಭಿಮತ

ಚೀನಾ–ಭಾರತ ಸೇನೆ ವಾಪಸ್ ಕರೆಸಿಕೊಳ್ಳುವ ಕ್ರಮದಿಂದ ಉತ್ತೇಜನಗೊಂಡಿದ್ದೇವೆ: ರಷ್ಯಾ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ಲಡಾಖ್‌ನ ವಿವಾದಿತ ಪ್ರದೇಶಗಳಿಂದ ಭಾರತ ಮತ್ತು ಚೀನಾ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಮತ್ತು ಉಭಯ ರಾಷ್ಟ್ರಗಳ ನಡುವಿನ ರಚನಾತ್ಮಕ ಮಾತುಕತೆಯಿಂದ ಉತ್ತೇಜನಗೊಂಡಿರುವುದಾಗಿ ರಷ್ಯಾ ಹೇಳಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಷ್ಯಾ ಮಿಷನ್‌ ಉಪ ಮುಖ್ಯಸ್ಥ ರೋಮನ್ ಬಬುಶಕಿನ್‌,  ‘ಬ್ರಿಕ್ಸ್, ಎಸ್‌ಸಿಒ ಮತ್ತು ಆರ್‌ಐಸಿ ಗುಂಪುಗಳಂತಹ ವೇದಿಕೆಗಳಲ್ಲಿ ತಮ್ಮ ಸಂಬಂಧಗಳನ್ನು ಮುಂದುವರಿಸಲು ರಷ್ಯಾ ಎರಡೂ ರಾಷ್ಟ್ರಗಳನ್ನು ಉತ್ತೇಜಿಸುತ್ತಿದೆ ಎಂದರು.

ಓದಿ: 

‘ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಾಗುತ್ತಿರುವ ಬೆಳವಣಿಗೆ ಹಾಗೂ ಗಡಿಯಿಂದ ಸೇನೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯಿಂದ ಉತ್ತೇಜನಗೊಂಡಿದ್ದೇವೆ‘ ಎಂದು ಬಬುಶಕಿನ್ ತಿಳಿದ್ದಾರೆ.

ಭಾರತ ಮತ್ತು ಚೀನಾ, ಶಾಂಘೈ ಸಹಕಾರ ಸಂಸ್ಥೆಯ(ಎಸ್‌ಸಿಒ) ಸದಸ್ಯ ರಾಷ್ಟ್ರಗಳಾಗಿವೆ. ರಷ್ಯಾ – ಭಾರತ–ಚೀನಾ (ಆರ್‌ಐಸಿ) ಗುಂಪಿನ ಸದಸ್ಯರಾಷ್ಟ್ರಗಳಾಗಿವೆ. ಅಲ್ಲದೆ ಬ್ರಿಕ್ಸ್‌(ಬ್ರೆಜಿಲ್‌–ರಷ್ಯಾ–ಇಂಡಿಯಾ–ಚೀನಾ–ದಕ್ಷಿಣ ಆಫ್ರಿಕಾ) ಸದಸ್ಯರಾಷ್ಟ್ರಗಳಾಗಿವೆ ಎಂದು ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು