ಶುಕ್ರವಾರ, ಅಕ್ಟೋಬರ್ 2, 2020
24 °C
ಐಸಿಐಸಿಐ ಬ್ಯಾಂಕ್‌–ವಿಡಿಯೊಕಾನ್‌ ಪ್ರಕರಣ

ಇಡಿಯಿಂದ ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಪತಿ ದೀಪಕ್ ಕೊಚ್ಚಾರ್‌ ಬಂಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದೀಪಕ್‌ ಕೊಚ್ಚಾರ್ ಮತ್ತು ಚಂದಾ ಕೊಚ್ಚಾರ್‌

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರ ಣದಲ್ಲಿ ಭಾಗಿ ಯಾಗಿರುವ ದೀಪಕ್ ಕೊಚ್ಚಾರ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿ ಕಾರಿಗಳು (ಇಡಿ) ಸೋಮವಾರ ಬಂಧಿಸಿದ್ದಾರೆ.

‘ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್‌ ಅವರ ಪತಿ ದೀಪಕ್‌ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಮುಂಬೈನಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ‌ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೊಕಾನ್‌ ಸಮೂಹಕ್ಕೆ ಬ್ಯಾಂಕ್‌ನಿಂದ ಸಾಲ ನೀಡುವ ಮೂಲಕ ಅಕ್ರಮ ಹಣ ವರ್ಗಾವಣೆಗೆ ನೆರವು ನೀಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಕೊಚ್ಚಾರ್‌ ದಂಪತಿಯ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಈ ವರ್ಷದ ಆರಂಭದಲ್ಲಿ ಚಂದಾ ಅವರಿಗೆ ಸೇರಿದ್ದ ₹78 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.

ಏನಿದು ಹಗರಣ?

ವಿಡಿಯೊಕಾನ್ ಸಂಸ್ಥೆಯು 2009ರಿಂದ 2011ರ ನಡುವೆ ಐಸಿಐಸಿಐ ಬ್ಯಾಂಕ್‌ನಿಂದ ₹1,875 ಕೋಟಿ ಹಣವನ್ನು ಸಾಲ ಪಡೆದಿತ್ತು. ವಿಡಿಯೊಕಾನ್ ದೀಪಕ್ ಕೊಚ್ಚಾರ್‌ ಹಾಗೂ ಚಂದಾ ಕೊಚ್ಚಾರ್ ನೇತೃತ್ವದ ನುಪವರ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿತ್ತು. ಇದಾದ ಹತ್ತು ತಿಂಗಳ ನಂತರ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿತ್ತು.

ವಿಡಿಯೊಕಾನ್‌ ಕಂಪೆನಿಯು ನುಪವರ್‌ ರಿನೆವೆಬಲ್ಸ್‌ ಜತೆ ಸೇರಿ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿತ್ತು. ನುಪವರ್‌ ಕಂಪೆನಿ ಚಂದಾ ಕೊಚ್ಚಾರ್‌ ಅವರ ಪತಿ ಪವನ ವಿದ್ಯುತ್‌ ಉದ್ಯಮಿ ದೀಪಕ್‌ ಕೊಚ್ಚಾರ್‌ ಅವರದ್ದು. ‘ವೀಡಿಯೊಕಾನ್‌ಗೆ ಐಸಿಐಸಿಐ ಭಾರೀ ಸಾಲ ನೀಡಲು ಚಂದಾ ಅವರ ಪತಿಯ ಹಿತಾಸಕ್ತಿಯೇ ಕಾರಣ’ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು