ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Exit Poll Results: ಗುಜರಾತ್ ಮತ್ತೆ ಬಿಜೆಪಿ ತೆಕ್ಕೆಗೆ, ಹಿಮಾಚಲ ಪ್ರದೇಶ ಅತಂತ್ರ

ನವದೆಹಲಿ: ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಎರಡು ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೇರಲಿದೆ ಎಂಬ ಲೆಕ್ಕಾಚಾರ ಇದೀಗ ಶುರುವಾಗಿದೆ.

68 ಸ್ಥಾನಗಳನ್ನು ಹೊಂದಿರುವಹಿಮಾಚಲ ಪ್ರದೇಶವಿಧಾನಸಭೆಗೆ ನವೆಂಬರ್‌ 12ರಂದು ಒಂದೇ ಹಂತದಲ್ಲಿ ಮತ್ತು182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಎರಡು ಹಂತಗಳಲ್ಲಿ (ಡಿಸೆಂಬರ್‌ 1 ಹಾಗೂ 5ರಂದು) ಮತದಾನ ನಡೆದಿದೆ.

ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಗುಜರಾತ್‌ನಲ್ಲಿ ಬಿಜೆಪಿ ಏಳನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ.ಹಿಮಾಚಲ ಪ್ರದೇಶದಲ್ಲಿಯೂ ಬಿಜೆಪಿ ಮೈಲುಗೈ ಸಾಧಿಸಲಿದೆ. ಆದರೆ, ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದಿವೆ.ಎರಡೂ ಕಡೆ ಕಾಂಗ್ರೆಸ್‌ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

ಹಿಮಾಚಲ ಪ್ರದೇಶದಲ್ಲಿ 2017ರ ಚುನಾವಣೆಯಲ್ಲಿ ಬಿಜೆಪಿ 44 ಮತ್ತು ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಜಯ ಸಾಧಿಸಿದ್ದವು. ಮೂರು ಕ್ಷೇತ್ರಗಳು ಉಳಿದವರ ಪಾಲಾಗಿದ್ದವು.ಅದೇ ವರ್ಷಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ99 ಕಡೆ ಮತ್ತು ಕಾಂಗ್ರೆಸ್‌ 77 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು. ಆರು ಸ್ಥಾನಗಳು ಉಳಿದವರಿಗೆ ದಕ್ಕಿದ್ದವು.

ಈ ಬಾರಿಹಿಮಾಚಲ ಪ್ರದೇಶದಲ್ಲಿ ಈ ಬಾರಿ ಶೇ 75.6 ರಷ್ಟು ಹಾಗೂಗುಜರಾತ್‌ನಲ್ಲಿಶೇ 58.38ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಗುಜರಾತ್‌ನಲ್ಲಿ ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದ್ದ ಎಎಪಿಗೆ ಮತದಾರರು ಮಣೆ ಹಾಕಿಲ್ಲ ಎಂಬುದನ್ನು ಮತಗಟ್ಟೆ ಸಮೀಕ್ಷೆಗಳು ಸ್ಪಷ್ಟವಾಗಿ ಹೇಳಿವೆ.

‌ಈ ಎರಡೂ ರಾಜ್ಯಗಳ ಚುನಾವಣೆ ಫಲಿತಾಂಶ ಗುರುವಾರ (ಡಿಸೆಂಬರ್‌ 8) ಪ್ರಕಟಕೊಳ್ಳಲಿದೆ.

ಸಮೀಕ್ಷೆಗಳ ಪ್ರಕಾರ ಗುಜರಾತ್ ವಿಧಾನಸಭೆಯಲ್ಲಿಯಾರಿಗೆ ಎಷ್ಟು ಸ್ಥಾನ?
ಇಂಡಿಯಾ ಟಿವಿ–ಮ್ಯಾಟ್ರೈಜ್‌

ಬಿಜೆಪಿ: 109 ರಿಂದ 124 ಸ್ಥಾನ
ಕಾಂಗ್ರೆಸ್‌: 51 ರಿಂದ 66 ಸ್ಥಾನ
ಎಎಪಿ: 0 ರಿಂದ 7 ಸ್ಥಾನ

ಜನ್‌ ಕೀ ಬಾತ್‌
ಬಿಜೆಪಿ: 125 ರಿಂದ 130 ಸ್ಥಾನ
ಕಾಂಗ್ರೆಸ್‌: 40 ರಿಂದ 50 ಸ್ಥಾನ
ಎಎಪಿ:3 ರಿಂದ 5 ಸ್ಥಾನ

ನ್ಯೂಸ್‌ ಎಕ್ಸ್‌
ಬಿಜೆಪಿ: 117 ರಿಂದ 140 ಸ್ಥಾನ
ಕಾಂಗ್ರೆಸ್‌: 34 ರಿಂದ 51 ಸ್ಥಾನ
ಎಎಪಿ:6 ರಿಂದ 13 ಸ್ಥಾನ
ಇತರರು: 1 ರಿಂದ 2 ಸ್ಥಾನ

ಟಿವಿ9
ಬಿಜೆಪಿ: 125 ರಿಂದ 130
ಕಾಂಗ್ರೆಸ್‌: 40 ರಿಂದ 50
ಎಎಪಿ: 3 ರಿಂದ 5

ರಿಪಬ್ಲಿಕ್‌ ಪಿ–ಮಾರ್‌ಕ್ಯೂ
ಬಿಜೆಪಿ: 128 ರಿಂದ 140 ಸ್ಥಾನ
ಕಾಂಗ್ರೆಸ್‌: 20 ರಿಂದ 42 ಸ್ಥಾನ
ಎಎಪಿ: 2 ಯಿಂದ 10 ಸ್ಥಾನ

ಟೈಮ್ಸ್‌ನೌ–ಇಟಿಜಿ
ಬಿಜೆಪಿ: 131 ಸ್ಥಾನ
ಕಾಂಗ್ರೆಸ್‌: 41 ಸ್ಥಾನ
ಎಎಪಿ: 6 ಸ್ಥಾನ
ಇತರರು: 4 ಸ್ಥಾನ

ಚಾಣಕ್ಯ
ಬಿಜೆಪಿ: 139 ರಿಂದ 161 ಸ್ಥಾನ
ಕಾಂಗ್ರೆಸ್‌: 10 ರಿಂದ 28 ಸ್ಥಾನ
ಎಎಪಿ: 4 ರಿಂದ 18 ಸ್ಥಾನ
ಇತರರು:0 ರಿಂದ 4 ಸ್ಥಾನ

ಸಮೀಕ್ಷೆಗಳ ಪ್ರಕಾರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
ಝೀ ನ್ಯೂಸ್‌
ಬಿಜೆಪಿ: 35 ರಿಂದ 40 ಸ್ಥಾನ
ಕಾಂಗ್ರೆಸ್‌: 20 ರಿಂದ 25 ಸ್ಥಾನ
ಎಎಪಿ: 0 ರಿಂದ 3 ಸ್ಥಾನ
ಇತರರು: 1 ರಿಂದ 5 ಸ್ಥಾನ

ಎನ್‌ಡಿಟಿವಿ
ಬಿಜೆಪಿ: 37 ಸ್ಥಾನ
ಕಾಂಗ್ರೆಸ್‌: 30 ಸ್ಥಾನ

ನ್ಯೂಸ್‌ ಎಕ್ಸ್‌
ಬಿಜೆಪಿ: 32 ರಿಂದ 40 ಸ್ಥಾನ
ಕಾಂಗ್ರೆಸ್‌: 27 ರಿಂದ 34 ಸ್ಥಾನ
ಇತರರು: 1 ರಿಂದ 2

ಟೈಮ್ಸ್‌ ನೌ
ಬಿಜೆಪಿ: 38 ಸ್ಥಾನ
ಕಾಂಗ್ರೆಸ್‌: 28 ಸ್ಥಾನ

ರಿಪಬ್ಲಿಕ್‌ ಪಿ–ಮಾರ್‌ಕ್ಯೂ
ಬಿಜೆಪಿ: 34 ರಿಂದ 39 ಸ್ಥಾನ
ಕಾಂಗ್ರೆಸ್‌: 28 ರಿಂದ 33 ಸ್ಥಾನ
ಎಎಪಿ: 0 ಯಿಂದ 1ಸ್ಥಾನ
ಇತರರು: 1 ರಿಂದ 4 ಸ್ಥಾನ

ಆ್ಯಕ್ಸಿಸ್‌–ಮೈ ಇಂಡಿಯಾ
ಬಿಜೆಪಿ: 24 ರಿಂದ 34 ಸ್ಥಾನ
ಕಾಂಗ್ರೆಸ್‌: 30 ರಿಂದ 40 ಸ್ಥಾನ
ಇತರರು: 4 ರಿಂದ 8 ಸ್ಥಾನ

ಆ್ಯಕ್ಸಿಸ್‌–ಮೈ ಇಂಡಿಯಾ
ಬಿಜೆಪಿ: 33 ಸ್ಥಾನ
ಕಾಂಗ್ರೆಸ್‌: 33 ಸ್ಥಾನ
ಇತರರು: 2 ಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT