ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವೊವ್ಯಾಕ್ಸ್‌’ನ 2 , 3ನೇ ಹಂತದ ಟ್ರಯಲ್‌: ಅನುಮತಿ ನೀಡಲು ಶಿಫಾರಸು

2–17 ವರ್ಷದವರ ಮೇಲೆ ಪ್ರಯೋಗ
Last Updated 27 ಜುಲೈ 2021, 17:51 IST
ಅಕ್ಷರ ಗಾತ್ರ

ನವದೆಹಲಿ: 2 ರಿಂದ 17 ವರ್ಷ ವಯೋಮಾನದವರ ಮೇಲೆ ಕೋವಿಡ್‌ ಲಸಿಕೆ ‘ಕೋವೊವ್ಯಾಕ್ಸ್‌’ನ 2 ಮತ್ತು 3ನೇ ಹಂತದ ಟ್ರಯಲ್‌ಗಳನ್ನು ನಡೆಸಲು ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾಗೆ (ಎಸ್‌ಐಐ) ಅನುಮತಿ ನೀಡುವಂತೆ ಕೇಂದ್ರೀಯ ಔಷಧ ಪ್ರಾಧಿಕಾರ ಮಂಗಳವಾರ ಶಿಫಾರಸು ಮಾಡಿದೆ.

ಅಮೆರಿಕ ಮೂಲದ ನೋವಾವ್ಯಾಕ್ಸ್‌ ಕಂಪನಿ ‘ಕೋವೊವ್ಯಾಕ್ಸ್‌’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಈ ಲಸಿಕೆಯ ಉತ್ಪಾದನೆಗೆ ಎಸ್‌ಐಐಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಕಂಪನಿ ಪರವಾನಗಿ ನೀಡಿದೆ.

‘ಕೆಲವು ಷರತ್ತುಗಳೊಂದಿಗೆ ಟ್ರಯಲ್‌ ನಡೆಸಲು ಅನುಮತಿ ನೀಡುವಂತೆ ಪ್ರಾಧಿಕಾರ ಶಿಫಾರಸು ಮಾಡಿದೆ. ಒಟ್ಟು 920 ಮಕ್ಕಳು ಈ ಟ್ರಯಲ್‌ನ ಭಾಗವಾಗಲಿದ್ದಾರೆ. 2–11 ವರ್ಷ ಹಾಗೂ 12 ರಿಂದ 17 ವರ್ಷ ವಯೋಮಾನದ ಗುಂಪುಗಳಿರಲಿದ್ದು, ತಲಾ 460 ಮಕ್ಕಳಿರಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ಲಸಿಕೆಯ 2 ಮತ್ತು 3ನೇ ಹಂತದ ಟ್ರಯಲ್‌ ಆರಂಭಕ್ಕೆ ಅನುಮತಿ ನೀಡುವಂತೆ ಕೋರಿ ಎಸ್‌ಐಐ ಕಳೆದ ವಾರ ಪರಿಷ್ಕೃತ ಅರ್ಜಿಯನ್ನು ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT