ಭಾನುವಾರ, ಜೂನ್ 13, 2021
23 °C

ಗುಜರಾತ್‌ ಕರಾವಳಿ ತಲುಪಿದ ತೌತೆ ಚಂಡಮಾರುತ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಗುಜರಾತ್‌ ಕರಾವಳಿಯಲ್ಲಿ ಎನ್‌ಡಿಆರ್‌ಎಫ್‌ ತಂಡ

ಗಾಂಧಿನಗರ: ತೀವ್ರಗೊಂಡಿರುವ 'ತೌತೆ' ಚಂಡಮಾರುತವು  ಸೋಮವಾರ ರಾತ್ರಿ ಗುಜರಾತ್‌ ಕರಾವಳಿಯನ್ನು ಪ್ರವೇಶಿಸಿದೆ. ಮಳೆ, ಗಾಳಿಯ ಅಬ್ಬರವು ಮುಂದಿನ ಎರಡು ಗಂಟೆಗಳು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಗಾಂಧಿನಗರದಲ್ಲಿರುವ ನಿಯಂತ್ರಣ ಕೇಂದ್ರದಲ್ಲಿ ತೌತೆ ಚಂಡಮಾರುತದ ಪರಿಸ್ಥಿತಿಯನ್ನು  ಅವಲೋಕಿಸುತ್ತಿದ್ದಾರೆ. ಕರಾವಳಿ ಪ್ರದೇಶದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.

ಭಾರತೀಯ ಸೇನೆಯ 180 ತಂಡಗಳು ಹಾಗೂ ಒಂಬತ್ತು ಎಂಜಿನಿಯರ್‌ ಕಾರ್ಯಪಡೆಗಳು ಚಂಡಮಾರುತದ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿವೆ. ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರೊಂದಿಗೆ ವಲಯದ ಮುಖ್ಯಕಚೇರಿ, ವಲಯದ ಕಮಾಂಡರ್‌ಗಳು ಸಂಪರ್ಕದಲ್ಲಿದ್ದಾರೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.  

ಮುನ್ನೆಚ್ಚರಿಕೆ ಕ್ರಮವಾಗಿ ಕನಿಷ್ಠ 1.50 ಲಕ್ಷ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

ಗುಜರಾತ್‌ನಲ್ಲಿ 1998ರಲ್ಲಿ ಅಬ್ಬರಿಸಿದ್ದ ಭಾರೀ ಚಂಡಮಾರುತದಲ್ಲಿ ಸುಮಾರು 4,000 ಜನರು ಸಾವಿಗೀಡಾಗಿದ್ದರು ಹಾಗೂ ನೂರಾರು ಕೋಟಿ ಮೌಲ್ಯದ ಆಸ್ತಿ–ಪಾಸ್ತಿಗೆ ಹಾನಿಯಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು