ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಜಾಲತಾಣಗಳಲ್ಲಿನ ನಕಲಿ ಪ್ರಚಾರವೇ ಸವಾಲು –ರಾಜೀವ್‌ ಕುಮಾರ್

Last Updated 6 ಡಿಸೆಂಬರ್ 2022, 11:23 IST
ಅಕ್ಷರ ಗಾತ್ರ

ನವದೆಹಲಿ: ‘ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಸುಳ್ಳು ಪ್ರಚಾರ ಕಾರ್ಯಗಳು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದರ ಮೇಲೂ ಪರಿಣಾಮ ಬೀರುತ್ತಿವೆ’ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಹೇಳಿದ್ದಾರೆ.

ಜರ್ಮನಿ ವಿದೇಶಾಂಗ ಸಚಿವೆ ಅನ್ನಲೀನಾ ಬೇರ್ಬಾಕ್‌ ನೇತೃತ್ವದ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಪ್ರವೃತ್ತಿ ಚುನಾವಣೆ ನಿರ್ವಹಣೆ ಕುರಿತು ಯಾವುದೇ ಸಂಸ್ಥೆಗೆ ಸಾಮಾನ್ಯ ಸವಾಲಾಗಿದೆ’ ಎಂದು ಅಭಿಪ್ರಾಯಪಟ್ಟರು.

ನಿಯೋಗಕ್ಕೆ ಭಾರತದ ಚುನಾವಣಾ ವ್ಯವಸ್ಥೆಯ ಚಿತ್ರಣ ನೀಡಿದ ಅವರು, ‘ಚುನಾವಣೆ ಅತಿದೊಡ್ಡದಾದ ಕಸರತ್ತು. 95 ಕೋಟಿ ಮತದಾರರಿದ್ದು, 11 ಲಕ್ಷ ಮತಗಟ್ಟೆಗಳಿವೆ.ಚುನಾವಣೆಗೆ ಒಂದು ಕೋಟಿ ಸಿಬ್ಬಂದಿ ನಿಯೋಜಿಸಲಾಗುತ್ತದೆ’ ಎಂದರು.

ಚುನಾವಣಾ ಆಯೋಗವು ಈ ಕುರಿತ ಹೇಳಿಕೆಯಲ್ಲಿ ‘ಸಾಗಣೆ, ಸಂಚಾರದ ಸವಾಲಿನ ಜೊತೆಗೆ ಜಾಲತಾಣಗಳಲ್ಲಿ ನಡೆಯುವ ನಕಲಿ ಪ್ರಚಾರಗಳು ಆಯೋಗಕ್ಕೆ ಇತ್ತೀಚಿಗೆ ಎದುರಾಗುತ್ತಿರುವ ಸಾಮಾನ್ಯ ಸವಾಲಾಗಿವೆ ಎಂದು ಆಯುಕ್ತರು ತಿಳಿಸಿದರು’ ಎಂದಿದೆ.

ಜರ್ಮನಿಯ ವಿದೇಶಾಂಗ ಸಚಿವೆಯು ಇದೇ ಸಂದರ್ಭದಲ್ಲಿ ದೇಶದಲ್ಲಿನ ಚುನಾವಣಾ ಕಾರ್ಯಶೈಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತು ನಿಯೋಗಕ್ಕೆ ಪ್ರಾತ್ಯಕ್ಷಿಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT